ಧರ್ಮ ರಾಜಕಾರಣ
ಚಿತ್ರದುರ್ಗ ಶರಣ ಪರಂಪರೆಯ ಮಠದ ಮೇಲೆ ಪಂಚ ಪೀಠಗಳ ಕಣ್ಣು ?

ಗೂಳಿ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಚಿತ್ರದುರ್ಗದ ಶ್ರೀ ಮುರುಘಾ ಶರಣರ ಮೇಲೆ ಬಂದ ಘೋರ ಆರೋಪ ಪಂಚಪೀಠಗಳಿಗೆ ರಸಗವಳವನ್ನೆ ಉಂಟು ಮಾಡಿದೆ. ಹೇಗಾದರೂ ಸೈ ಅಲ್ಲಮಪ್ರಭುಗಳು ಸ್ಥಾಪಿಸಿದ ಮುರುಘಾ ಪರಂಪರೆಯನ್ನು ಮುಂಡಾಮುಚ್ಚಬೇಕೆಂದು ಹವಣಿಸುತ್ತಿವೆ.
ಸರಕಾರಕ್ಕೆ ಈಗಾಗಲೆ ಹಲವಾರು ಜನ ಮಠಾಧಿಪತಿಗಳು ಮತ್ತು ಜನ ಪ್ರತಿನಿಧಿಗಳ ಮೂಲಕ ತನ್ನ ನುಸುಗುನ್ನಿತನವನ್ನು ಮುಂದುವರೆಸಿವೆ. ಶರಣ ಪರಂಪರೆಯನ್ನು ಸಾರಿ ಹೇಳಿದ್ದ ಮಠ ಶರಣರ ತೊತ್ತಾಗಬೇಕೆ ಹೊರತು, ಸನಾತನಿಗಳ ತುತ್ತುರಿ ಆಗಬಾರದು.
ಜಾತಿ ಮತ ಪಂಥವನ್ನು ಕಡೆಗಣಿಸಿ ವಚನ ಸಾಹಿತ್ಯ ಹಾಗೂ ಶರಣ ಚಿಂತನೆಗಳನ್ನು ಹಲವಾರು ಪುಸ್ತಕಗಳ , ಹಾಡಿನ ಮತ್ತು ನಾಟಕ ಹಾಗೂ ಸಮಾರಂಭಗಳ ಮೂಲಕ ಕರ್ನಾಟಕದ ತುಂಬೆಲ್ಲ ಛಾಪು ಮೂಡಿಸಿದ್ದ ಪೀಠ ಕಾರ್ಯ ಹಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.

ಸರಕಾರವೇನಾದರೂ ಈ ಸನಾತನಿಗಳ ಮಾತು ಕೇಳಿ ಮುಂದಡಿ ಇಟ್ಟರೆ ಕರ್ನಾಟಕದ ಪ್ರಜ್ಞಾವಂತ ಲಿಂಗಾಯತರು ಸುಮ್ಮನೆ ಕೂಡಲಾರರು.
ಈ ಬಗ್ಗೆ ಮುರುಘಾ ಮಠದಲ್ಲಿನ ಮಠಾಧೀಶರು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಹುತ್ತ ಕಟ್ಟುವುದು ಗೆದ್ದಲು. ಬಂದು ಸೇರಿ ಕೊಳ್ಳುವುದು ಹಾವು.
ಕರಗತ ಕಲೆ.
ಶರಣ ಸಂತತಿ ಹಾವಿಗೆ ಅವಕಾಶವೀಯ ಬಾರದು.
ಬಸವ ಪರಂಪರೆಯ ಅಲ್ಲಮಪ್ರಭು ಪರಂಪರೆಯ ವಿರಕ್ತ ಮಠಗಳಲ್ಲಿ ಪಂಚ ಆಚಾರ್ಯರ ಮೂಗು ತೂರಿಸುವಿಕೆ ಸಲ್ಲದು . ಮುರ್ಗಾಪರಂಪರೆ ಅಥವಾ ಯಾವುದೇ ವಿರಕ್ತ ಪರಂಪರೆಯಾಗಲಿ ಅದು ಬಸವಭಕ್ತರ ಸ್ವತ್ತು . ಕೇವಲ ಮಠಗಳ ಆಸ್ತಿ ಸಂಪತ್ತನ್ನು ನೋಡಿ ಅವುಗಳನ್ನು ದೋಚಿಕೊಳ್ಳಲು ಬಸವ ಪರಂಪರೆಯ ಜಂಗಮ ತತ್ವವನ್ನು ಗಾಳಿಗೆ ತೂರಿ ಜಾತಿಯ ಹೆಸರಿನ ಮೇಲೆ ಇಲ್ಲ ಸಣ್ಣದವರನ್ನು ಕೂಡಿಸುವುದು ಬಸವ ಭಕ್ತರು ಲಿಂಗಾಯತರು ಸಹಿಸಿಕೊಳ್ಳುವುದಿಲ್ಲ . ಈ ನಿಟ್ಟಿನಲ್ಲಿ ಎಲ್ಲಾ ಲಿಂಗಾಯಿತ ಮುಖಂಡರು ನಾಯಕರು ಧರ್ಮಯರು ಮುಂದಾಗ ಬೇಕಾಗಿದೆ . ಎಚ್ಚರಗೊಳ್ಳಬೇಕಿದೆ . ಜಂಗಮ ತತ್ವ ಎಂಬುದು ಜಾತಿಯಿಂದ ಬರುವುದಲ್ಲ ಅದು ಅರಿವು ಮತ್ತು ಆಚರಣೆಯ ಮೂಲಕ ಅಳವಡುವಂತಹ ಪ್ರಕ್ರಿಯೆ . ಅದರ ಮೂಲಕ ಬೆಳೆಸಿಕೊಂಡ ಮಹಾ ವ್ಯಕ್ತಿತ್ವ . ಈಗಾಗಲೇ ಬಸವಕುಮಾರ ಶ್ರೀಗಳು ಪ್ರಬುದ್ಧತೆಯಿಂದ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ. ಪರಂಪರೆಯನ್ನು, ಆಡಳಿತವನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುವಾಗ ಅವರನ್ನು ಪಕ್ಕಕ್ಕೆ ಸರಿಸಿ ಮತ್ತೊಬ್ಬರನ್ನು ತಮಗೆ ಅನುಕೂಲಕರವಾಗುವಂತೆ ತಂದು ಕೂಡಿಸುವುದು ಅಪರಾಧ . ಜಾಗೋ..ಲಿಂಗಾಯತ್ ಜಾಗೋ…..