ಎಷ್ಟೊಂದು ನಂಜು ? ಈ ಸುರೇಶ್ ಕುಮಾರಗೆ ?!

ಎಷ್ಟೊಂದು ನಂಜು ? ಈ ಸುರೇಶ್ ಕುಮಾರಗೆ ?!
ತಮ್ಮ ಮತಕ್ಷೇತ್ರದಲ್ಲಿ ಈಗಾಗಲೆ ಸಿದ್ದಗೊಂಡು ನಿಂತಿರುವ ಬಸವಣ್ಣನವರ ಪ್ರತಿಮೆ ಅನಾವರಣ ಮಾಡಿಸಲು ಮೀನಮೇಷ ಮಾಡುತ್ತಿರುವ ಸುದ್ದಿಗಳಿವೆ.
ಜೊತೆಗೆ ಸರಕಾರ ತೀರಾ ಇತ್ತೀಚೆಗೆ ಕರ್ನಾಟಕದ ಬುದ್ದಿ ಜೀವಿಗಳ ಸಮಿತಿಯೊಂದನ್ನು ರಚಿಸಿದೆ. ಈ ಮೂಲಕ ಕೂಡಲ ಸಂಗಮದಲ್ಲಿ ಅನುಭವ ಮಂಟಪದ ಪುನರ್ ಸೃಷ್ಟಿಯ ಸಭೆಯನ್ನು ಆಯೋಜಿಸಬಯಸಿದೆ. ಒಂದೆರಡು ಟ್ಯಾಬಲೈಡ್ ಗಳ ಮೂಲಕ ಹಲವು ಜಿಲ್ಲೆಗಳಲ್ಲಿ ಸಾಂಸ್ಕೃತಿಕ ನಾಯಕನ ಚಿಂತನೆಗಳನ್ನು ಜನ ಮಾನಸಕ್ಕೆ ತಲುಪಿಸಲು ಬಯಸಿದೆ.
ಎಪ್ರಿಲ್ ತಿಂಗಳ ೨೯& ೩೦ ರಂದು ಬಸವ ಜಯಂತಿಯನ್ನು ಕೂಡಲ ಸಂಗಮದಲ್ಲಿ ನೆರವೇರಿಸಬಯಸಿದೆ. ಬಸವಣ್ಣನವರು ಕಟ್ಟ ಬಯಸಿದ ಸಮ ಸಮಾಜವನ್ನು ವಿರೋಧಿಸುವ ಪಟ್ಟಭದ್ರ ಶಕ್ತಿಯ ಪಳಿಯುಳಿಕೆಯಾದ ಶ್ರೀ ಸುರೇಶ್ ಕುಮಾರ ಅವರಿಗೆ ಅತೀವ ನೋವಾಗಿದೆ.
ಜನ ಮಾನಸಕ್ಕೆ ಬಸವಣ್ಣ ಮತ್ತವರ ಶರಣ ಸಂಗಾತಿಗಳ ವಿಚಾರ ತಲುಪಬಾರದು ಎಂಬುದು ಕುಬ್ಜ ಮನಸ್ಥಿತಿಯ ಪ್ರತೀಕ.
ಆದ್ದರಿಂದಲೆ ಸರಕಾರವನ್ನು ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ ರೀತಿಯಲ್ಲಿ ಏನೋ ಮಾಡುವುದಕ್ಕೆ ಹುಮ್ಮಸ್ಸು ಎಂದವರು ವಿಷ ಕಕ್ಕುತಾರೆ. ನಾಡಿನ ಬುದ್ದಿ ಜೀವಿಗಳನ್ನು ಆಸ್ತಾನ ತಜ್ಞರ ಸಮಿತಿ ಎಂದು ಕರೆಯುವ ಮೂಲಕ ತಮ್ಮ ದುರ್ಬುದ್ಧಿಯನ್ನು ಪ್ರದರ್ಶಿಸಿದ್ದಾರೆ.
ಈ ಮನುವಾದಿ ಮನುಷ್ಯನ ಅಂತರಂಗದಲ್ಲಿ ಲಿಂಗಾಯತರು ಅವರುಗಳ ಇರುವಿಕೆಯನ್ನು ಅವರ ಪ್ರಗತಿಯನ್ನು ಹೊಟ್ಟೆಕಿಚ್ಚು ತನದಿಂದ ಸಹಿಸುವುದಕ್ಕೆ ಆಗದೆ ವಿಲಿವಿಲಿ ಒದ್ದಾಡುತ್ತಿದ್ದಾನೆ. ಇವನಿಗೆ ಸೂಕ್ತರೀತಿಯ ಪಾಠಕಲಿಸಬೇಕಾಗಿದೆ.