ಕಂಡದ್ದು ಕಂಡಹಾಗೆ

ಗೀತವ ಹಾಡಿದಡೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ.

Spread the love

ಗೀತವ ಹಾಡಿದಡೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ.

ಎರಡೆAಬತ್ತು ಕೋಟಿ ಗೀತವ ಹಾಡಿದಡೇನಯ್ಯಾ ?
ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ.
ಮನವುಘನವ ನೆಮ್ಮದು, ಘನವು ಮನವ ನೆಮ್ಮದು.
ಹಾಡಿದಡೇನು ಓದಿದರೇನು ? ಗುಹೇಶ್ವರ
ನೀನೊಲಿದ ಕಾಲಕ್ಕೆ ಎರಡೆಂಬತ್ತು ಕೋಟಿ
ಗೀತವೆಲ್ಲವೂ ನಿಮ್ಮದೊಂದು ಮಾತಿನೊಳಕವಯ್ಯಾ

ಬಸವಾದಿ ಶರಣರು ಬರುವುದಕ್ಕಿಂತ ಮುಂಚೆಯೆ ಭಾರತದಲ್ಲಿ ಮಹಾನ್ ಪಂಡಿತರು, ಜ್ಞಾನಿಗಳು, ಪವಾಡ ಪುರುಷರು ಆಗಿ ಹೋಗಿದ್ದರು. ವೇದ ಆಗಮ ಪುರಾಣ ಗೀತೆಗಳೆಲ್ಲವೂ ರಚಿಸಲ್ಪಟ್ಟಿದ್ದವು. ಧರ್ಮ ಗ್ರಂಥವೆAದು ಕರೆಯಲ್ಪಡುವ ಪುಸ್ತಕಗಳೆಲ್ಲವೂ ಮಸ್ತಕದಲ್ಲಿ ಹುಟ್ಟಿದ್ದವು. ಅವುಗಳ ಸತತ ಪಾರಾಯಣದಿಂದ ಸದ್ಗತಿ ಸಿಗುತ್ತದೆ. ಆತ್ಮ ಅಮರವಾಗುತ್ತದೆ. ಸ್ವರ್ಗಕ್ಕೆ ನೇರ ಪ್ರವೇಶ ಸಿಗುತ್ತದೆ ಎಂದೆಲ್ಲ ಭಾವಿಸಲಾಗಿತ್ತು. ಸ್ವರ್ಗವೆನ್ನುವುದು ಭೂಮಿಯ ಮೇಲಿಲ್ಲದ ಆಕಾಶದ ಆಚೆ ಇರುವ ಒಂದು ನಿರ್ವಾತ ಪ್ರದೇಶ. ಅಲ್ಲಿ ಸುಖದ ಸುಪ್ಪತ್ತಿಗೆಯೆ ಇರುತ್ತದೆ. ಹೆಂಡತಿ ಮಕ್ಕಳು ಸಂಸಾರ ಕುಟುಂಬ ಸಮಾಜ ಇತ್ಯಾದಿ ಶಬ್ಧಗಳ ಗೊಡವೆ ಅಲ್ಲಿರುವುದಿಲ್ಲ. ದೇವಾನು ದೇವತೆಗಳು ಹೇಗೋ ಹಾಗೆಯೆ ಸ್ವರ್ಗಕ್ಕೆ ಹೋದವರಿಗೆ ಚಿಂತೆ ಎಂಬುದೆ ಇರುವುದಿಲ್ಲ. ಮೇಲಾಗಿ ಅಲ್ಲಿ ರಂಬೆ ಊರ್ವಸಿ ಮೇನಕೆ ತಿಲೋತ್ತಮೆ ಮುಂತಾದವರು ಇದ್ದು ಅವರೆಲ್ಲ ಅಲ್ಲಿ ಹೋದವರ ಸೇವೆಗೆ ಇರುತ್ತಾರೆ ಎಂದು ನಂಬಿಸಿಕೊAಡು ಬರಲಾಗಿತ್ತು.

ಭೂಮಿಯ ಮೇಲಿನ ನಮ್ಮ ಜೀವನ ಕರ್ಮಗಳ ಫಲಶೃತಿ. ಈ ಜೀವನ ಸುಳ್ಳು. ಅಲ್ಲಿರುವುದು ಸತ್ಯ. ಹೆಂಡತಿ ಮಕ್ಕಳು ಬಂಧು ಬಳಗ ಎಲ್ಲವೂ ನಶ್ವರ. ಸ್ವರ್ಗದ ಜೀವನ ಮಾತ್ರ ಸತ್ಯ ಎಂಬ ಗ್ರಂಥಸ್ಥ ಮಾತುಗಳು ಎಲ್ಲರನ್ನು ಆಳುತ್ತಿದ್ದವು. ಭೂಮಿಯ ಮೇಲಿನ ಬಡತನ ಶ್ರೀಮಂತಿಕೆ ಜಾತಿ ವ್ಯವಸ್ಥೆ ಎಲ್ಲವೂ ಹಿಂದಿನ ಜನ್ಮದ ಕರ್ಮಫಲವೆಂದು ಆ ಗ್ರಂಥಗಳು ಹೇಳುತ್ತಿದ್ದವು. ಅಂದAತೆ ಆಗಿನ ಸಾಮಾಜಿಕ ಧಾರ್ಮಿಕ ಆರ್ಥಿಕ ಏರುಪೇರುಗಳಿಗೆಲ್ಲ ಕಾರಣವಾಗಿದ್ದವು ಎಂದು ಖಚಿತವಾಗಿ ಹೇಳಲಾಗಿತ್ತು. ಯಾರೊ ಕೆಲವರು ಸುಖದ ಸುಪ್ಪತ್ತಿಗೆಯಲ್ಲಿದ್ದರೆ ಅದಕ್ಕೆ ಅವರು ಹಿಂದೆ ಮಾಡಿದ ಧರ್ಮ(?) ಕಾರ್ಯವೆ ಕಾರಣ ಎಂದು ಹೇಳಲ್ಪಡುತ್ತಿತ್ತು.

ಆ ಗ್ರಂಥಗಳ ಆಧಾರದ ಮೇಲೆಯೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಪಂಚಮ ಎಂದು ಜನಾಂಗವನ್ನು ವಿಂಗಡಿಸಿಕೊAಡು ಬರಲಾಯಿತು. ಆದ್ದರಿಂದಲೆ ಜ್ಞಾನ ಎಲ್ಲರ ಸ್ವತ್ತು ಆಗಲಿಲ್ಲ. ವಿದ್ಯೆ ಕಲಿಯಲು ಎಲ್ಲರಿಗೂ ಹಕ್ಕುಗಳು ಇರಲಿಲ್ಲ. ದ್ರೋಣಾಚಾರ್ಯನ ಪ್ರತೀಮೆಯನ್ನು ಮಾಡಿಟ್ಟುಕೊಂಡು ಬಿಲ್ವಿದ್ಯೆ ಕಲಿತ ಏಕಲವ್ಯನನ್ನು ಸಹ ಮೋಸದಿಂದ ಕಲಿತವಿದ್ಯೆಯನ್ನು ಕಸಿದುಕೊಳ್ಳಲಾಯಿತು. ತಮ್ಮ ಮನಸ್ಸಿನ ವಿಕೃತಿಗೆ ಹೇಗೆ ಬರುತ್ತದೊ ಹಾಗೆ ಬರೆದ ಮೋಸದ ಗ್ರಂಥವನ್ನು ಆ ದೇವರೆ ಬರೆದುದು ಎಂದು ಎಲ್ಲರನ್ನು ಯಾಮಾರಿಸಲಾಗಿತ್ತು.

ಇವೆಲ್ಲವುಗಳನ್ನು ಸೂಕ್ಷö್ಮವಾಗಿ ಗಮನಿಸಿದ ಮಹಾತ್ಮ ಬಸವಣ್ಣನವರು ಆ ಅಮೂಲಾಗ್ರ ವ್ಯವಸ್ಥೆಯ ಮೂಲ ಬೇರುಗಳಿಗೆ ಕೊಳ್ಳಿ ಇಟ್ಟರು. ಏಕೆಂದರೆ ಸ್ವತಃ ಬಸವಣ್ಣನವರು ಸಹ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ್ದರಿಂದ ಆ ಜಾತಿ ಕೊಡಮಾಡುವ ಎಲ್ಲ ಸುಖ ಗೌರವ ಸವತ್ತುಗಳನ್ನು ಅನುಭವಿಸಿ ನಾಚಿಕೊಂಡಿದ್ದರು. ಆನು ಹಾರುವನೆಂದರೆ ಕೂಡಲ ಸಂಗಮದೇವಾ ನಗುವನಯ್ಯಾ ಅಂದರು. ತನ್ನ ಹುಟ್ಟು ಸಹ ಎಲ್ಲರಂತೆ ಎಂಬುದನ್ನು ತಿಳಿಸಲು ಅಡ್ಡ ದೊಡ್ಡ ನಾನಲ್ಲವಯ್ಯಾ, ದೊಡ್ಡ ಬಸಿರು ಎನಗಿಲ್ಲವಯ್ಯಾ ಎಂದು ತಳ ಸಮೂಹವನ್ನು ಅಪ್ಪಿಕೊಳ್ಳುವ ಮೂಲಕ ತನ್ನನ್ನು ಅವರೊಂದಿಗೆ ಹೋಲಿಸಿಕೊಂಡು ಜಗತ್ತಿನ ಮೊಟ್ಟ ಮೊದಲ ಸಮಾನತಾವಾದಿ ಬಸವಣ್ಣನವರು.

ಓದಿ ಓದಿ ವೇದ ವಾದಕ್ಕಿಕ್ಕಿತ್ತು
ಕೇಳಿ ಕೇಳಿ ಶಾಸ್ತç ಸಂದೇಹಕ್ಕಿಕ್ಕಿತ್ತು.
ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು
ನೀನೆತ್ತ ನಾನೆತ್ತಲೆಂದು ಬೊಮ್ಮ ಬಕ್ಕಟ ಬಯಲು ಗುಹೇಶ್ವರ

ವೇದಗಳು ಓದಿ ಓದಿ ವಾದವೆ ಹುಟ್ಟಿತು ಹೊರತು ಇನ್ನೇನು ಆಗಲಿಲ್ಲ. ಶಾಸ್ತçಗಳನ್ನು ಕೇಳಿ ಕೇಳಿ ಸಂದೇಹ ಹುಟ್ಟಿತೆ ಹೊರತು. ಯಾವ ಸಂದೇಹವೂ ಹರಿಹಾರವಾಗಿಲ್ಲಿ. ಅರ್ಥಮಾಡಿಕೊಳ್ಳಬಹುದೆಂದ ಆಗಮ ಸಹ ಅಗಲಕ್ಕೆ( ಊಟದ ತಾಟು ) ಸೀಮಿತವಾಯ್ತು. ಇನ್ನು ಅಖಂಡ ಪರಿಪೂರ್ಣವಾದ, ಚಿತ್ ಸತ್ ಸ್ವರೂಪನಾದ ನೀ ಎತ್ತ ನಾನೆತ್ತ ? ಬ್ರಹ್ಮನೆಂದುದೆ ಬಟಾ ಬಯಲು. ಬಯಲು ತತ್ವವನ್ನು ಅರಿಯದೆ ಭಯದ ನಡುವೆಯೆ ಬದುಕಿ ಕ್ಷಣ ಕ್ಷಣವೂ ಸಾಯುತ್ತಿರುವ ಜನರನ್ನು ನೋಡಿ ಅಲ್ಲಮ ಹೀಗೆ ಖಂಡತುAಡವಾಗಿ ಹೇಳಿಬಿಡುತ್ತಾರೆ. ಓದಿಹೆನೆಂಬ ಒಡಲು,ಕಂಡೆನೆAಬ ಭ್ರಾಂತು, ಸರ್ವರಿಗೂ ಹೇಳಿಹೆನೆಂಬ ತೇಜಸ್ಸು ಇದಿರಿಗೆ ಹೇಳೆ ತನ್ನ ಉದರದ ಕಕ್ಕುಲಾತಿಗೆ ಮಾತ್ರವೆ ಹೊರತು ತನ್ನ ಅರಿಯುವುದಕ್ಕೆ ಆಗಲಿಲ್ಲ ಎಂದು ಅಂಬಿಗರ ಚೌಡಯ್ಯ ಅಂಥವನ್ನು ಕಟಕಿ ಆಡುತ್ತಾರೆ.

ಆದ್ದರಿಂದಲೆ ಕೇವಲ ಬೌದ್ಧಿಕ ಕಸರತ್ತಿನಲ್ಲಿ ಹುಟ್ಟಿದ ಗೀತಗಳು ಮಾತಿನ ಬಣಮೆಯಲ್ಲದೆ ಇನ್ನೇನು ಇಲ್ಲ ಎಂಬುದು ಶರಣರ ಮನದಿಂಗಿತ. ಎರಡೆಂಬತ್ತು ಕೋಟಿ ಗೀತ ಹಾಡಿದಡೇನು ? ಬೆಟ್ಟಕ್ಕೆ ನಾಯಿ ಬೊಗಳಿದಂತೆ ಆಯಿತೆ ಹೊರತು ಇನ್ನೇನು ಆಗಲಿಲ್ಲ. ಮನಸ್ಸು ಘನವಾದುದನ್ನು ನಂಬಲಿಲ್ಲ. ಘನವಾದುದನ್ನು ಅರಿಯುವ ಶಕ್ತಿ ಮನಸ್ಸಿಗೆ ಇಲ್ಲ. ಗೀತೆಯನ್ನು ಹಾಡಿದರೇನು, ಆಡಿದರೇನು ? ನಿನ್ನ ಅರಿವು ನಿನಗೆ ಆಗದೆ ಹೋದರೆ ಎಲ್ಲವೂ ನಿಶ್ಪಲ. ಯಾವದೆ ವ್ಯಕ್ತಿಯೊಳಗೆ ಅರಿವು ಬಂದಾಗ ಮಾತ್ರ ಏನೆಲ್ಲವೂ ಸಾಧ್ಯ. ಅರಿವನ್ನು ತಂದುಕೊಡದೆ ಕೇವಲ ಗೀತೆ ಶಾಸ್ತç ಪುರಾಣ ಇತ್ಯಾದಿಗಳನ್ನು ಕಲಿತರೆ ಅದು ವ್ಯರ್ಥ.

ಗೀತೆ ಶಾಸ್ತç ಪುರಾಣಗಳು ಕೆಲವರ ಪಾರಮ್ಯವನ್ನು ಹೆಚ್ಚಿಸಬಹುದೆ ಹೊರತು, ಬಹುಜನರನ್ನು ದಾರಿದ್ರö್ಯದಿಂದ ಮೇಲೆತ್ತಲು ಸಾಧ್ಯವಿಲ್ಲ ಎಂಬುದು ಶರಣರ ಇಂಗಿತ. ಹೃದಯಾಂತರಾಳದಿAದ ಬಂದ ಅನುಭಾವದ ಸಾಹಿತ್ಯ ಮಾತ್ರ ಬದುಕನ್ನು ಕಟ್ಟಿಕೊಡಬಲ್ಲದು.ಅದನ್ನು ಈಗ ಆಗು ಮಾಡಿಕೊಡುವವರು ಯಾರು ? ಸರಕಾರವೊ ? ಧಾರ್ಮಿಕ ಕೇಂದ್ರಗಳೊ ?

೦ ವಿಶ್ವಾರಾಧ್ಯ ಸತ್ಯಂಪೇಟೆ

Related Articles

Leave a Reply

Your email address will not be published. Required fields are marked *

Back to top button