ಸುದ್ದಿ

ಕಾಮಾಂಧನ ಮುಖಕ್ಕೆ ಅಕ್ಕ ಸೀರೆ ಬಿಚ್ಚೆಸೆದದ್ದು ಅಭೂತಪೂರ್ವ ಪ್ರತಿಭಟನೆ

Spread the love

ರಾಯಚೂರು : ಇಡಿ ಜಗತ್ತು ಹೆಮ್ಮೆ ಮತ್ತು ಅಚ್ಚರಿ ಪಡುವಂಥ ವ್ಯಕ್ತಿಗಳ ಸಾಲಿನಲ್ಲಿ ಅಕ್ಕಮಹಾದೇವಿ ತಾಯಿ ಅಗ್ರಗಣ್ಯಳು. ಬಹುತೇಕ ಲೋಹಗಳು, ಕರಗುತ್ತವೆ.ಅಥವಾ ತುಕ್ಕು ಹಿಡಿಯುತ್ತವೆ.ಆದರೆ ಅಕ್ಕಮಹಾದೇವಿ ತಾಯಿಯೊಂದು ಕರಗದ, ಉಕ್ಕಿನ ಲೋಹ ಎಂದು ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.

ಸ್ಥಳಿಯ ಬಸವ ಕೇಂದ್ರ ಏರ್ಪಡಿಸಿದ್ದ ಅಕ್ಕಮಹಾದೇವಿಯ ಜಯಂತೋತ್ಸವದ ಅಂಗವಾಗಿ ಹೆದರದಿರು ಮನವೆ ಎಂಬ ವಿಷಯ ಕುರಿತು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ಶರಣರ ವಚನಗಳು ಅವರ ಬದುಕಿನ ಪ್ರತಿಬಿಂಬ. ವಚನಗಳಲ್ಲಿ ಅವರ ಅನುಭವ, ಅನುಭಾವ ಇದೆ. ಶರಣರು ಯಾವುದಕ್ಕೂ ಹೆದರದೆ ಬೆದರದೆ ಧೈರ್ಯವಾಗಿ ಬದುಕನ್ನು ಎದುರಿಸಿದರು. ಎಂದಿಗೂ ದೈನ್ಯವಾಗಿ ದೇವರನ್ನು ಪ್ರಾರ್ಥಿಸಲಿಲ್ಲ. ದೇವರಿಗೇ ಸವಾಲು ಹಾಕಿ ಜೀವನ ಮಾಡಿದರು.

ಮೌಢ್ಯ ಕಂದಾಚಾರಗಳನ್ನು ಬೆಳೆಸುವ ಸನಾತನ ಸಂಸ್ಕೃತಿಯ ವೇದ ಶಾಸ್ರ್ರ ಆಗಮ ಪುರಾಣ ಇತ್ಯಾದಿಗಳನ್ನು ತಿರಸ್ಕರಿಸಿದರು. ಅಕ್ಕಮಹಾದೇವಿ ತಾಯಿಯೂ ಇವ ಕುಟ್ಟಲೇಕೆ ? ಕುಸಕಲೇಕೆ ? ಎಂದು ಪ್ರಶ್ನಿಸಿದರು.

ಪುರುಷ ದೌರ್ಜನ್ಯದ ವಿರುದ್ಧ ಅಕ್ಕ ಆ ಕಾಮಾಂಧನ ವಿರುದ್ಧ ಸ್ಪೋಟಿಸಿ, ಆತನ ಮುಖಕ್ಕೆ ಸೀರೆ ಬಿಚ್ಚೆಸೆದು ಬೆತ್ತಲೆಯಾಗಿ ನಿಂತಳು. ಇಂಥ ಪ್ರತಿಭಟನೆ ಜಗತ್ತಿನ ಇತಿಹಾಸವೆ ಬೆರಗುಗೊಳಿಸುವಂಥದ್ದು ಎಂದರು.

ಲಿಂಗಾಯತ ಮಠಾಧೀಶರು ಐಷಾರಾಮಿ ಜೀವನ ಸಾಗಿಸಲಿ, ಕೋಟ್ಹಂತರ ಬೆಲೆ ಬಾಳುವ ಗಾಡಿಯಲ್ಲೂ ತಿರುಗಾಡಲಿ ಆದರೆ ಬಸವ ತತ್ವವನ್ನೂ ಅವರ ಮರೆಯದಿರಲಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿದರು.

https://youtu.be/w3vv-WmJtjs

ಸಭೆಯಲ್ಲಿ ವೆಂಕಟಾಪುರ ಶರಣರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ರಾಚಣ್ಣಗೌಡರು ವಹಿಸಿದ್ದರು. ಆರಂಭದಲ್ಲಿ ಮುಕ್ತಾ ನರಕಲ್ಲದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಸವಕೇಂದ್ರದ ಮಹಿಳೆಯರು ಗಣೇಶನ ಗುಡಿಯಿಂದ ಬಸವಕೇಂದ್ರದವರೆಗೂ ಶರಣರ ವಚನಗಳನ್ನು ಹೇಳುತ್ತ  ತಲೆಯ ಮೇಲೆ ವಚನಗಳ ಕಟ್ಕ್ಕು ಇಟ್ಮುಕೊಂಡು ಮಾಡಿದ ಮೆರವಣಿಗೆ ಮನಮೋಹಕವಾಗಿತ್ತು.

ರಾಯಚೂರಿನ ಬಸವ ಕೇಂದ್ರದ ಮಹಿಳೆಯರು ಮಾಡಿದ ಪರಿಶ್ರಮ ಮಾದರಿಯಾಗಿತ್ತು. ಈ ಸಭೆಯಲ್ಲಿ ಅಕ್ಕನ ಬಳಗದ ಅಧ್ಯಕ್ಷರಾದ ಜಗದೇವಿ ಚನ್ನಬಸವಣ್ಣ ಮತ್ತು ಗೌರವ ಅಧ್ಯಕ್ಷರಾದ ಅನ್ನಪೂರ್ಣಮ್ಮ ಮೇಟಿ ಪಾರ್ವತಿ ಪಾಟೀಲ್ ಅಶ್ವಿನಿ ಮಾಟೂರ್ ಸುಮಂಗಳ ಪಾಟೀಲ್ ಪೂರ್ಣಿಮಾ ಡಾಕ್ಟರ್ ಪ್ರಿಯಾಂಕ ಸರಸ್ವತಿ ಪಟ್ಟಣಶೆಟ್ಟಿ ಶೀಲಾ ಬಾಳಿಕಾಯಿ ಮೊದಲಾದವರು ಇದ್ದರು.

One Comment

  1. ಶಂಕರ ಬಿದರಿಯವರಿಗೆ ಬಸವ ಜಯಂತಿಯನ್ನು ಹೇಗೆ ಆಚರಿಸಬೇಕೆಂಬುದನ್ನು ಪಾಠಮಾಡಿ. ತಮ್ಮ ಹೇಳಿಕೆಹಿಂಪಡೆದು ಕ್ಷಮೆಕೇಳುವಂತೆಮಾಡಿ.

Leave a Reply

Your email address will not be published. Required fields are marked *

Back to top button