
ಶಹಾಪುರ : ತಾಲೂಕಿನ ಶಿರವಾಳ ಗ್ರಾಮದಲ್ಲಿ ಬಸವ ಜಯಂತೋತ್ವದ ಅಂಗವಾಗಿ ೧೧ ದಿನಗಳ ಬಸವ ದರ್ಶನ ಪ್ರವಚವನ್ನು ಏರ್ಪಡಿಸಲಾಗಿದೆ.
ಸದರಿ ಬಸವ ದರ್ಶನವನ್ನು ಪೂಜ್ಯ ಶ್ರೀ.ಪ್ರಭುದೇವ ಸ್ವಾಮೀಜಿಗಳು ಲಿಂಗಾಯತ ಮಹಾಮಠದ ಬೀದರ ಅವರು ನಡೆಸಿಕೊಡಲಿದ್ದಾರೆ.
ಬಸವ ತತ್ವವನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರವಹಿಸುವಂತಾಗಬೇಕು ಎಂಬ ಸಂಕಲ್ಪದಿಂದ ಹೊರಟಿರುವ ಪ್ರಭು ಸ್ವಾಮೀಜಿಗಳ ಸಂಕಲ್ಪಕ್ಕೆ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ಬಸವಮಾರ್ಗ ಹಾರೈಸುತ್ತದೆ.
ಬಸವ ಜಯಂತೋತ್ಸವವನ್ನು ಕೇವಲ ಮೆರವಣಿಗಾಗಿ ಆಚರಿಸುವ ಯಾದಗಿರಿ ಜಿಲ್ಲೆಯ ಲಿಂಗಾಯತರಿಗೆ ಶಿರವಾಳ ಗ್ರಾಮದ ಯುವಕರು ಹುರುಪಿನಿಂದ ಪ್ರವಚನ ಏರ್ಪಡಿಸಿ ತಮ್ಮ ಸಹೃದಯತನವನ್ನು ಮೆರೆದಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ.