ಕಂಡದ್ದು ಕಂಡಹಾಗೆ
ಮಹಾನ್ ಸಾಧಕ ಕುಟುಂಬದ ಸೊಸೆ ಭವಾನಿ ರೇವಣ್ಣ

ಮಹಾನ್ ಸಾಧಕ ಕುಟುಂಬದ ಸೊಸೆ ಭವಾನಿ ರೇವಣ್ಣ ಹತ್ತು ತಿಂಗಳ ನಂತರ ಹಾಸನ ಪುರಪ್ರವೇಶ ಮಾಡಿದ್ರಂತೆ. ಅದಕ್ಕೆ ಹೆಣ್ಣುಮಕ್ಕಳು ಹೂಮಳೆಗರೆದು ಸ್ವಾಗತಿಸಿದ್ದಾರೆ. ಈಗ ಬರುವ ಅನುಮಾನ ಅಂದ್ರೆ ಇಲ್ಲಿ ಮಾನಗೆಟ್ಟವರು ಯಾರು?
ಪಕ್ಷದ ಕಾರ್ಯಕರ್ತೆಯರನ್ನೂ ಸೇರಿ ನೂರಾರು ಮಹಿಳೆಯರ ಮಾನಹಾನಿ ಮಾಡಿದ ಪ್ರಜ್ವಲ್ ರೇವಣ್ಣನ ಅನಾಚಾರದ ಬಗ್ಗೆ ಪಕ್ಷದ ಕಾರ್ಯಕರ್ತೆಯರಿಗೆ ಸಿಟ್ಟು ಇಲ್ಲ ಎಂಬುದು ಈ ಕಾಲದ ದುರಂತ. ಆತನಿಂದ ಬಲಾತ್ಕಾರಕ್ಕೆ ಒಳಗಾದ ಬಡ ಮಹಿಳೆಯನ್ನು ಅಪಹರಿಸಿ ಕೂಡಿಟ್ಟ ಪ್ರಕರಣದ ಆರೋಪಿ ಭವಾನಿ. ನಾಳೆ ಪ್ರಜ್ವಲ್ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದರೂ ಇದೇ ರೀತಿ ಹೂಮಳೆಗರೆದು ಜೈಕಾರ ಹಾಕಲು ಹೇಸಲ್ಲ. ಹೆಣ್ಣುಕುಲಕ್ಕೆ ಕಳಂಕ ಇಂತಹ ಕಾರ್ಯಕರ್ತೆಯರು. ದಿಕ್ಕಾರ ನಿಮ್ಮ ನಾಚಿಕೆಗೆಟ್ಟ ವರ್ತನೆಗೆ.
ಹೇಮಾ ವೆಂಕಟ್