ಪ್ರಚಲಿತ ಸಂಗತಿ

ಸಿದ್ಧಾರೂಡರಿಗೂ ರಾಮಗೂ ಏನು ಸಂಬಂಧ ?

ವೈದಿಕ ಧರ್ಮ ಒಪ್ಪದ ಸಿದ್ಧಾರೂಡರು

Spread the love

ಸಿದ್ಧಾರೂಢರ ನಿಜವಾದ ಇತಿಹಾಸ ಮುಚ್ಚಿ ಹಾಕಲಾಗುತ್ತಿದೆ

Oplus_16908288

ಸಿದ್ಧಾರೂಢ ಸ್ವಾಮಿಗಳ ಇತಿಹಾಸವನ್ನು ಮುಚ್ಚಿ ಹಾಕುತ್ತ ಬರಲಾಗುತ್ತಿದೆ, ಅದನ್ನು ಹೊರಗೆ ತೆಗೆಯುವ ಸತ್ಯವನ್ನು ಹೇಳುವ ಒಂದು ಅವಕಾಶ ಇವತ್ತು ನನಗೆ ದೊರಕಿದೆ, ಸತ್ಯ ಕಹಿಯಾಗಿರುತ್ತದೆ ಅದನ್ನು ಹೇಳಲು ಯಾವ ಭಯವೂ ನನಗಿಲ್ಲ ಅದು ಸಮಾಜಕ್ಕೆ ಉಪಯೋಗವಾಗುತ್ತದೆ, ಸಿದ್ಧಾರೂಢರ ಆಶೀರ್ವಾದ ನನ್ನ ಮೇಲೆ ಇದೆ ಎಂದು ನನ್ನ ದೃಢವಾದ ನಂಬಿಕೆ

ಸಿದ್ಧಾರೂಢರು ಜನ್ಮತದಳೆದದ್ದು ಬೀದರ್ ಜಿಲ್ಲೆಯ ಚಳಕಾಪುರ ಗ್ರಾಮದಲ್ಲಿ ಅವರ ಜನ್ಮ ದಿನಾಂಕ ದಾಖಲೆಗಳಲ್ಲಿ ಇರುವುದು ಮಾರ್ಚ್ 26, 1836 ಆದರೆ ಅವರ ಜನ್ಮದಿನವನ್ನು ಅಂದು ಆಚರಿಸದೆ ರಾಮನವಮಿಯಂದು ಆಚರಿಸಲಾಗುತ್ತಿದೆ ಇದು ಸಿದ್ಧಾರೂಢರ ನೈಜವಾದ ಇತಿಹಾಸಕ್ಕೆ ಮಾಡುವ ದ್ರೋಹ ಅಲ್ವೆ ?

ಸಿದ್ಧಾರೂಢರಿಗೂ ರಾಮನಿಗೂ ಏನು ಸಂಬಂಧ ? ಸಿದ್ಧಾರೂಢರು ರಾಮಾಯಣವನ್ನಾಗಲಿ ಭಗವದ್ಗೀತೆಯನ್ನಾಗಲಿ ಪ್ರವಚನ ಮಾಡಿಲ್ಲ ಅವರು ಹೇಳಿದ್ದು ನಿಜಗುಣ ಶಾಸ್ತ್ರವನ್ನ, ಅವರಿಗೆ ನಿಜಗುಣರ ಪುನರ್ಜನ್ಮ ಆಗಿದೆ ಎಂದು ಹೇಳುತ್ತಿದ್ದರು.
ರಾಮಾಯಣ ಮತ್ತು ಭಗವದ್ಗೀತೆ ದ್ವೈತ ಸಿದ್ಧಾಂತ, ನಿಜಗುಣ ಶಾಸ್ತ್ರ ಅದ್ವೈತ ಸಿದ್ದಾಂತ, ರಾಮಾಯಣ ಮತ್ತು ಮಹಾಭಾರತ ಜಾತಿಭೇದವನ್ನು ಬಒಪ್ಪುತ್ತದೆ ಉದಾಹರಣೆಗೆ ರಾಮಾಯಣದಲ್ಲಿನ ಒಂದು ಪ್ರಸಂಗ ಶೂದ್ರ ಶಂಭುಖನ ಹತ್ಯೆ, ಮಹಾಭಾರತದಲ್ಲಿ ಏಕಲವ್ಯನ ಹೆಬ್ಬೆರಳು ಕತ್ತರಿಸುವ ಪ್ರಸಂಗ.

ಸಿದ್ದಾರೂಢರನ್ನು ರಾಮನ ಅವತಾರ ಎಂದು ಸುಳ್ಳು ಹೇಳಲಾಗುತ್ತಿದೆ ಅವರು ರಾಮನ ಅವತಾರ ಅಲ್ಲ. ಅದಕ್ಕೆ ಸಿದ್ಧಾರೂಢರ ಜನ್ಮ ದಿನವನ್ನು ಮಾರ್ಚ್ 26 ರಂದೆ ಆಚರಿಸಬೇಕು.

ಸಿದ್ಧಾರೂಢ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಹಿತ ಆಚರಿಸಲಾಗುತ್ತಿದೆ ಕೃಷ್ಣನಿಗೂ ಸಿದ್ದಾರೂಢರಿಗೂ ಏನು ಸಂಬಂಧ ಸಿದ್ಧಾರೂಢರು ರಾಮ, ಕೃಷ್ಣರ ಭಜನೆ ಮಾಡಿಲ್ಲ ಅವರು ಕೇವಲ ಓಂ ನಮಃ ಶಿವಾಯ, ಶಿವನಾಮ ಸ್ಮರಣೆಯನ್ನು ಮಾತ್ರ ಹೇಳಿದ್ದಾರೆ ಓಂ ನಮಃ ಶಿವಾಯ ಮಂತ್ರವನ್ನು ಬಹಿರಂಗವಾಗಿ ಹೇಳಲು ಎಲ್ಲರಿಗೂ ಹೇಳಿಕೊಟ್ಟರು
ಇದರಿಂದ ಕ್ರೋದಗೊಂಡ ವೈದಿಕರು ಅವರಿಗೆ ಸಾಕಷ್ಟು ತೊಂದರೆಗಳನ್ನು ಕೊಟ್ಟರು

ಸಿದ್ಧಾರೂಢರು ವೈದಿಕ ಧರ್ಮವನ್ನಾಗಲಿ, ಬ್ರಾಹ್ಮಣ ಧರ್ಮವನ್ನಾಗಲಿ ಹಿಂದೂ ಧರ್ಮವನ್ನಾಗಲಿ ಒಪ್ಪಿಲ್ಲ ಅವರು ಒಪ್ಪಿದ್ದು ಸಮಾನತೆಯ ಧರ್ಮವನ್ನು, ಅಂದಿನ ಸಮಯದಲ್ಲಿ ಲಿಂಗಾಯತ ಕುರುಬ ಮಾರಾಠ, ಪಟ್ಟೆಗಾರ, ದಲಿತ, ಒಕ್ಕಲಿಗ, ಶೂದ್ರ, ಅಸ್ಪೃಶ್ಯ ಮುಂತಾದವರಿಗೆ ಸಮಾನತೆ ಇರಲಿಲ್ಲ ವೈದಿಕರಿಂದ ಅವರು ಶೋಷಣೆಗೆ ಒಳಗಾಗಿದ್ದರು ಶಿಕ್ಷಣದಿಂದ ವಂಚಿತರಾಗಿದ್ದರು.

ಶೂದ್ರರಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಕ್ಕುಗಳನ್ನು ಒದಗಿಸಿ ನ್ಯಾಯ ಕೊಡಿಸಲು ಸರ್ ಕಂಬಳಿ ಸಿದ್ದಪ್ಪನವರು ಹಾಗೂ ಕೊಲ್ಲಾಪುರದ ಶಾಹು ಮಹಾರಾಜರು ಬ್ರಾಹ್ಮಣೇತರ ಪರಿಷತ್‌ನ್ನು ಸ್ಥಾಪನೆ ಮಾಡಿದರು. ಈ ಚಳುವಳಿಯ ಮೊದಲನೆಯ ಸಮಾವೇಶ ಹುಬ್ಬಳ್ಳಿಯಲ್ಲಿ ನೆರೆವೇರಿತು ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದಾರೂಢರು ವಹಿಸಿದ್ದರು ಈ ಚಳುವಳಿಯ ಉದ್ದೇಶ ಸಮಾಜದಲ್ಲಿ ಸಮಾನತೆ ಸ್ಥಾಪನೆ, ಬ್ರಾಹ್ಮಣ್ಯ ವ್ಯವಸ್ಥೆ ವಿರುದ್ಧ ಪ್ರತಿರೋಧ, ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಉದ್ಯೋಗ ಮತ್ತು ಸ್ವಾಭಿಮಾನ ಕಲಿಸುವುದು, ಅಸ್ಪೃಶ್ಯತೆ ನಿರ್ಮೂಲನೆ, ಸಾಮಾಜಿಕ ಮತ್ತು ಧಾರ್ಮಿಕ ಪುನರ್ ವ್ಯಾಖ್ಯಾನ ಮಾಡುವುದು.

ಈ ಚಳುವಳಿಯೇ ಮುಂದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟಕ್ಕೆ ಪ್ರೇರಣೆ ಆಯ್ತು.ಇಂಥ ಕ್ರಾಂತಿಕಾರಿ ಹೋರಾಟಗಾರ ಸಿದ್ಧಾರೂಡನ್ನು ಭಕ್ತಿ ಪಂಥಕ್ಕೆ ಕಟ್ಟಿ ಹಾಕಿದ್ದಾರೆ ಈಗ ನಾವು ಅವರನ್ನು ಒಬ್ಬ ಸಮಾಜ ಸುಧಾರಕನಂತೆ ನೋಡಬೇಕಾಗಿದೆ ಅವರ ಕ್ರಾಂತಿಕಾರಕ ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕಾಗಿದೆ.

ಸಿದ್ಧಾರೂಢರ ಪ್ರಗತಿಪರ ವಿಚಾರಗಳು, ಏಕ ದೇವೋಪಾಸನೆ, ದಲಿತರ ಪರ ಹೋರಾಟ,ವೈಚಾರಿಕತೆಯನ್ನು ಸಹಿಸದ ವೈದಿಕರು ಅವರ ಮೇಲೆ ದ್ವೇಶಕಾರ ತೊಡಗಿದರು ಸಿದ್ಧಾರೂಢರ ತಲೆಯ ಮೇಲೆ ಬೆಂಕಿ ಇಟ್ಟರು, ಚಪ್ಪಲಿ ಇಟ್ಟರು ಕಡೆಗೆ ವಿಷವನ್ನೂ ಕುಡಿಸಿದರು. ಆದರೂ ಸಿದ್ದಾರೂಢರು ತಮ್ಮ ಸಮಾನತೆ ಹೋರಾಟವನ್ನು ಕೈ ಬಿಡಲಿಲ್ಲ ಜೀವನದ ಕೊನೆವರೆಗೂ ನಂಬಿದ ತತ್ವಗಳನ್ನು ಬಿಡಲಿಲ್ಲ.

ಅಂದು ಸಿದ್ಧಾರೂಢರ ಮಠ ಅನುಭವ ಮಂಟಪವಾಗಿತ್ತು. ಅಲ್ಲಿ ಚರ್ಚೆ ಮಾಡಲು ದೂರ ದೂರದಿಂದ ವಿದ್ವಾಂಸರು ಪಂಡಿತರು ಬರುತ್ತಿದ್ದರು ಅವರಲ್ಲಿ ಶಿಶುನಾಳ ಶರೀಫರು, ಗರಗದ ಮಡಿವಾಳಪ್ಪನವರು, ನವಲಗುಂದ ನಾಗಲಿಂಗಜ್ಜನವರು, ಕಬೀರ್ ದಾಸರು ಮುಂತಾದವರು ಇದ್ದರು. ಅವರ ಸಮಾನತೆಗೆ ಸಾಕ್ಷಿ ಮಠದಲ್ಲಿ ಕಬೀರರ ಸಮಾಧಿಯನ್ನು ನೋಡಬಹುದು.

ಅದರಲ್ಲಿ ಇನ್ನೊಬ್ಬರು ಮಹತ್ವಪೂರ್ಣವಾದಂತ ಒಬ್ಬ ವ್ಯಕ್ತಿಗಳು ಅವರು ಅಕ್ಕಲಕೋಟದ ಮಹಾರಾಜರು ಬಸವಣ್ಣನವರ ನಡೆನುಡಿಯಂತೆಯೇ ಸಿದ್ಧಾರೂಢರ ನಡೆನುಡಿಯೂ ಇದೆ ಅದಕ್ಕೆ ಸಿದ್ಧಾರೂಢರನ್ನ ಹುಬ್ಬಳ್ಳಿ ಬಸವಣ್ಣ ಇದ್ದಂಗ ಎಂದು ಉದ್ಘಾರ ತೆಗದ್ರಂತೆ.

1920 ರಲ್ಲಿ ಮಹಾತ್ಮ ಗಾಂಧಿಜಿ ಸಿದ್ಧಾರೂಢರನ್ನು ಭೇಟಿಯಾಗಲು ಬಂದಿದ್ದರು ಗಾಂಧೀಜಿ ಸಿದ್ಧಾರೂಢರನ್ನ ಸ್ವಾತಂತ್ರ್ಯ ಹೋರಾಟಕ್ಕೆ ಬರಲು ಆಹ್ವಾನ ನೀಡಿದರು ಆಗ ಸಿದ್ಧಾರೂಢರು ನಾನು ಈಗಾಗಲೇ ಸಮಾಜ ಸೇವೆಯನ್ನ ಮಾಡ್ತಾ ಇದ್ದೇನೆ ರಾಜಕೀಯ ಹೋರಾಟದಲ್ಲಿ ಭಾಗವಹಿಸುವ ಇಚ್ಛೆ ನನಗಿಲ್ಲ ಎಂದು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ ಇಂಥ ಎಲ್ಲ ದಾಖಲೆಗಳನ್ನು ಮುಚ್ಚಿ ಹಾಕಲಾಗಿದೆ ಇಂದು ಸಿದ್ಧಾರೂಢ ಮಠದಲ್ಲಿ ವೈದಿಕತೆಯ ವಿಜ್ರಂಭಿಸುತ್ತಿದೆ ಅಲ್ಲಿ ರಾಮನವಮಿ ಕೃಷ್ಣ ಜನ್ಮಾಷ್ಟಮಿ ದೇವಿ ಪುರಾಣ ಭಾಗವತ ಪುರಾಣ ಕೋಟಿ ಬಿಲ್ವಾರ್ಚನೆ ರುದ್ರ ಗಾಯತ್ರಿ ಮಂತ್ರ ಆರಂಭವಾಗಿದೆ ಸಿದ್ಧಾರೂಢರ ಮಠ ಮತ್ತೆ ಮರಳಿ ಸಮಾನತೆಯ ಮಠ ಆಗಬೇಕು ಒಂದು ಧರ್ಮಕ್ಕೆ ಸೀಮಿತ ಆಗಬಾರದು.

Kumaranna Patilsv

Related Articles

Leave a Reply

Your email address will not be published. Required fields are marked *

Back to top button