ಇತಿಹಾಸ

ಭಾರತೀಯ_ಬ್ರಾಹ್ಮಣರೇ_ಯುರೇಷಿಯನ್ಆರ್ಯರು

Spread the love

ಮಹಾಜನಗಳೇ ಮೈತ್ರಿಪೂರ್ಣ ಭೀಮ ವಂದನೆಗಳು. ಈ ಹಿಂದೆ ಇಂಟರ್ ಮೀಡಿಯಟ್ ಓದಿರುವ ಅನಂತಕುಮಾರ ಹೆಗಡೆ ಎಂಬ ಬ್ರಾಹ್ಮಣ ರಾಜಕಾರಣಿಯೊಬ್ಬ ದಲಿತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದ, ಗೋ.ಮಧುಸುಧನ ಎಂಬ ಕೃತಘ್ನ ರಾಜಕಾರಣಿ ಭಾರತದ ಸಂವಿಧಾನ ಮತ್ತು ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನ್ನಾಡಿದ್ದ, ಅರುಣಶೌರಿ ಎಂಬ ಆರ್.ಎಸ್.ಎಸ್. ಏಜಂಟ್ ಕೂಡಾ ದಲಿತರ ಬಗ್ಗೆ ಮತ್ತು ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನ್ನಾಡಿದ್ದ. ಹೀಗೆ ಭಾರತದಲ್ಲಿನ ಕೆಲವು ಬ್ರಾಹ್ಮಣ ಕುಹಕಿಗಳು ಈ ದೇಶದ ಮೂಲನಿವಾಸಿ ನಾಗ ಜನಾಂಗದವರಿಗೆ ಅಪಮಾನ ಆಗುವ ಹಾಗೆ ಆಗಾಗ್ಗೆ ಮಾತನ್ನಾಡುತ್ತಾರೆ ಯಾಕೆ ?

ಯಾಕೆಂದರೆ 1885ರಲ್ಲಿ ಯುರೇಷಿಯನ್ ಚಿತ್ಪಾವನ ಬ್ರಾಹ್ಮಣರಾದ #ಬಾಲಗಂಗಾಧರ_ತಿಲಕ, #ಗೋಪಾಲಕೃಷ್ಣ_ಗೋಖಲೆ, #ಬಿಪಿನ್_ಚಂದ್ರಪಾಲ್ ಮತ್ತು ಬಂಗಾಲಿ ಬ್ರಾಹ್ಮಣರಾದ #ಶ್ಯಾಮಾಪ್ರಸಾದ_ಮುಖರ್ಜಿ, #ಆರ್_ಡಿ_ಬ್ಯಾನರ್ಜಿ_ಚಟರ್ಜಿ ಇವರೆಲ್ಲಾ ಕೂಡಿಕೊಂಡು ವಿದೇಶಿ ವ್ಯಾಪಾರಿಗಳಾದ ಆಂಗ್ಲರನ್ನು ಓಡಿಸಲು ಒಂದು ಸಂಘಟನೆ ಕಟ್ಟಿಕೊಂಡರು.

ನಂತರ 1942ರಲ್ಲಿ ಖಿಲಾಪತ್ ಚಳುವಳಿಯಲ್ಲಿದ್ದ ಗಾಂಧೀಜಿಯನ್ನು ಬುಟ್ಟಿಗೆ ಹಾಕಿಕೊಂಡು ಬ್ರಿಟಿಷರು ವಿದೇಶಿಯರು ಅದಕ್ಕಾಗಿ #ಭಾರತ_ಬಿಟ್ಟು_ತೊಲಗಿ ಎಂಬ ಘೋಷ ವಾಖ್ಯದೊಂದಿಗೆ ಬ್ರಿಟಿಷರ ವಿರುದ್ಧ ಹೋರಾಟ ಆರಂಭ ಮಾಡಿ 1947ರಲ್ಲಿ “ಅಧಿಕಾರ ಹಸ್ತಾಂತರ’ ಮಾಡಿಕೊಂಡು ಇಲ್ಲಿವರೆಗೆ ಪಕ್ಷ ಯಾವುದೇ ಇದ್ದರೂ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಗದ್ದುಗೆ ಮೇಲೆ ಯಾರೇ ಕುಂತರೂ ಆಡಳಿತ ಮಾತ್ರ ಈ ಯುರೇಷಿಯನ್ ಬ್ರಾಹ್ಮಣರ ಸಂಘಟನೆಯಾದ #ರಾಷ್ಟ್ರಿಯ_ಸ್ವಯಂ_ಸೇವಕ_ಸಂಘ (R.S.S.) ಆಣತಿಯಂತೆ ದೇಶ ನಡೆಯುತ್ತಲಿದೆ.

#DNAReport ಬರುವುದಕ್ಕಿಂತ ಮೊದಲು ಭಾರತದಲ್ಲಿ ಬ್ರಾಹ್ಮಣರು ವಿದೇಶಿಯರಿದ್ದಾರೋ ಇಲ್ಲವೊ ಎನ್ನುವುದರ ಬಗ್ಗೆ ವಿವಾದವನ್ನು ಸೃಷ್ಟಿ ಮಾಡುತ್ತಲೇ ಇದ್ದರು,
ಏಕೆಂದರೆ ಬ್ರಾಹ್ಮಣರು ಇತಿಹಾಸ ವಿಷಯದಲ್ಲಿ, ಪುರಾತತ್ವದಲ್ಲಿ, ಭಾಷಾಶಾಸ್ತ್ರದಲ್ಲಿ, ಬಹಳ ನೈಜ ಇತಿಹಾಸ ನಾಶ ಮಾಡಲು ನಿಸ್ಸೀಮರು. ಮತ್ತು ತುಂಬಾ ಹಸ್ತಕ್ಷೇಪ ಮಾಡುತ್ತಲಿದ್ದರು.

ಆದ್ದರಿಂದ ಬ್ರಾಹ್ಮಣರೂ ಕೂಡಾ ಭಾರತಿಯರೇ ಎಂಬುವುದನ್ನು ದಾಖಲಿಸಿಕೊಂಡಿದ್ದಾರೆ. ಹಾಗು ಈ ಭ್ರಾಂತಿಯನ್ನು ಭಾರತೀಯರೆಲ್ಲರ ತಲೆಯಲ್ಲಿ ತುಂಬಲು ಪ್ರಯತ್ನಿಸಿದ್ದಾರೆ. ಈ ಭ್ರಾಂತಿ ನಿರ್ಮಾಣಕ್ಕೆ ಮೂಲಕಾರಣವೇನೆಂದರೆ;

ಬ್ರಿಟಿಷರನ್ನು ವಿದೇಶಿಯರೆಂದು ಘೋಷಣೆ ಮಾಡಿ ಅವರನ್ನು ಭಾರತವನ್ನು ಬಿಟ್ಟು ಹೋಗಲು ಅನಿವಾರ್ಯತೆ ತಂದೊಡ್ಡಿದವರು ಬ್ರಾಹ್ಮಣರ ಪಾತ್ರ ಬಹು ಮುಖ್ಯವಾದದ್ದು. ಅದಕ್ಕಾಗಿ #ಕ್ವಿಟ್_ಇಂಡಿಯಾ_ಮೊವ್ಮೆಂಟ್ ಹೆಸರಲ್ಲಿ ಬಳಕೆ ಮಾಡಿಕೊಂಡಿದ್ದರು.

ಭಾರತದಲ್ಲಿರುವ ಬ್ರಾಹ್ಮಣರಿಗೆ ತಾವೂ ಕೂಡಾ ಯುರೇಷಿಯನ್ಸ್ ಇದ್ದೇವೆ, ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ಭಾರತದ ಮೂಲನಿವಾಸಿಗಳು ಇದೇ ಆಧಾರದ ಮೇಲೆ ಬ್ರಾಹ್ಮಣರನ್ನೂ ವಿದೇಶಿಗಳು ಎಂದು ಭಾರತ ಬಿಟ್ಟು ಓಡಿಸಿದರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿರುವುದರಿಂದ ನಾವು ಕೂಡಾ ಭಾರತ ದೇಶದ ಮೂಲನಿವಾಸಿಗಳು ಎಂದು ಜನರಲ್ಲಿ ಭ್ರಾಂತಿಯನ್ನು ಹಬ್ಬಿಸುತ್ತಲಿದ್ದಾರೆ.

ಬ್ರಾಹ್ಮಣರು ಭಾರತದ ಮೂಲನಿವಾಸಿಗಳಾದ ಎಸ್ಸಿ. ಎಸ್ಟಿ. ಮತ್ತು ಓಬಿಸಿ ಗಳು ವಿದೇಶಿಯರು, ಬ್ರಾಹ್ಮಣರು ಮಾತ್ರ ಮೂಲನಿವಾಸಿಗಳು ಎಂಬ ಹುಸಿ ಭ್ರಮೆಯನ್ನು ಹುಟ್ಟುಹಾಕಿ ಗೊಂದಲ ಸೃಷ್ಟಿಸುತಿದ್ದಾರೆ…

(ಹೆಚ್ಚಿನ ಮಾಹಿತಿಗಾಗಿ-ಯುರೇಷಿಯನ್ ಪುಸ್ತಕ ಓದಿರಿ)

ಭಾರತದ ಬ್ರಾಹ್ಮಣರಾದ ನೀವುಗಳು ನಿಮ್ಮನ್ನು ನೀವು #ಆರ್ಯ, #ವಿಪ್ರ , #ಬ್ರಾಹ್ಮಣ, #ವೈದಿಕ ಎಂದು ಕರೆದುಕೊಳ್ಳುವ ನೀವು ಭಾರತದ ಮೂಲನಿವಾಸಿಗಳಲ್ಲ ಎಂಬುವುದಕ್ಕೆ ಈ ಕೆಳಕಂಡ ದಾಖಲೆಗಳನ್ನು ಕೊಡುತ್ತೇನೆ. ಅರ್ಥ ಆಗದೇ ಇದ್ದರೆ ನಾನು ನೀನು ಇಬ್ಬರೇ ದೂರದರ್ಶನದಲ್ಲಿ ಲೈವ್ ಚರ್ಚೆ ಮಾಡೋಣ, ಏನಂತಿಯಾ ತಾಕತ್ ಇದೆಯಾ ?.

ಬ್ರಾಹ್ಮಣರು ಪರದೇಶಿಗಳು ಅನ್ನೋದಕ್ಕೆ ದಾಖಲೆಗಳು ನೋಡಿ :👇

1) ಬ್ರಾಹ್ಮಣ ಪವಿತ್ರ ಗ್ರಂಥವಾದ #ಮನುಸ್ಮೃತಿ ಅಧ್ಯಾಯ. 2 ಶ್ಲೋಕ 24ರಲ್ಲಿ ಬ್ರಾಹ್ಮಣ ವಿದೇಶಿಗಳು ಎಂದು ದಾಖಲಿಸಲಾಗಿದೆ.

2) ಬ್ರಾಹ್ಮಣ ನಾಯಕರಾದ #ಬಾಲಗಂಗಾಧರ_ತಿಲಕರು ಬರೆದಿರುವ ” ಅರ್ಕ್ಟಿಕ ಹೋಮ್ ಇನ್ ದ ವೇದಾಸ್ ” ಎಂಬ ಪುಸ್ತಕದ ಪ್ರಥಮ ಭಾಗದಲ್ಲಿ ವೈದಿಕ ಆರ್ಯರ ಮೂಲಸ್ತಾನ ಉತ್ತರಾರ್ಧಗೋಳ ಎಂದು ದಾಖಲಿಸಿದ್ದಾರೆ.

3) ಬ್ರಾಹ್ಮಣ ನಾಯಕರಾದ #ಜವಾಹರಲಾಲ_ನೆಹರು ಅವರ ಪುಸ್ತಕ #ಭಾರತ_ದರ್ಶನ ಭಾಗ-1ರ ಪುಟ ಸಂಖ್ಯೆ 69/82 ರಲ್ಲಿ ಆರ್ಯರು ವಾಯುವ್ಯ ಮೂಲೆಯಿಂದ ಬಂದಿದ್ದಾರೆ ಎಂದು ದಾಖಲಿಸಿದ್ದಾರೆ.

4) ಬ್ರಾಹ್ಮಣ ನಾಯಕರಾದ #ಲಾಲಾ_ಲಜಪತರಾಯ್ ಬರೆದ ” ಭಾರತ ವರ್ಷ ಕಾ ಇತಿಹಾಸ್ ” ಪುಸ್ತಕದಲ್ಲಿ ಪುಟದ ಸಂಖ್ಯೆ 21-22 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

5) ಬ್ರಾಹ್ಮಣ ಇನ್ನೊಬ್ಬ ನಾಯಕರಾದ *ಬಾಲಗಂಗಾಧರ ತಿಲಕರು* ಬರೆದಿರುವ #ಭಾರತ_ವರ್ಷ_ಕಾ_ಇತಿಹಾಸ್’ ಪುಸ್ತಕದ ಪುಟ ಸಂಖ್ಯೆ 63 ಮತ್ತು 87 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

6) ಬ್ರಾಹ್ಮಣರಾದ ಪಂಡಿತ್ #ಜನಾರ್ಧನ್_ಭಟ್ ಬರೆದಿರುವ ಪುಸ್ತಕ ” ಮಾಧುರಿ_ಮಾಸಿಕ ಭಾರತೀಯ ಪುರಾತತ್ವ ಕೀ ನಯಿ ಖೋಜ್ ‘-1925 ” ಪುಟ ಸಂಖ್ಯೆ 27 ಮತ್ತು 29 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

7) ಬ್ರಾಹ್ಮಣರಾದ ಪಂಡಿತ್ #ಗಂಗಾ_ಪ್ರಸಾದರು ಬರೆದ ಪುಸ್ತಕ #ಜಾತಿ_ಭೇದ ಪುಸ್ತಕದ ಪುಟಸಂಖ್ಯೆ 10 ಮತ್ತು 27 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

8) ಬ್ರಾಹ್ಮಣರಾದ ರವೀಂದ್ರ ದರ್ಶನ ಬರೆದ ಪುಸ್ತಕ #ಸುಖಃ_ಸನ್ಪತ್ರಿ_ಭಂಡಾರಿ ಪುಸ್ತಕದ ಪುಟ ಸಂಖ್ಯೆ 21-22 ರಲ್ಲಿ ಆರ್ಯರು ವಿದೇಶಿಗಳೆಂದು ದಾಖಲಿಸಿದ್ದಾರೆ.

9) ಬ್ರಾಹ್ಮಣರಾದ *ನರೇಂದ್ರನಾಥ ಬಸು* ಅವರು ಬರೆದ ‘ಭಾರತೀಯ #ಲಿಪಿತತ್ವ ಪುಸ್ತಕದ ಪುಟ ಸಂಖ್ಯೆ 48-49 ರಲ್ಲಿ ಆರ್ಯರು ವಿದೇಶಿಗಳೆಂದು ದಾಖಲಿಸಿದ್ದಾರೆ.

10) ಬ್ರಾಹ್ಮಣರಾದ *ರಮೇಶ ಚಂದ್ರ ದತ್ತಾ* ಅವರು ಬರೆದ ‘ಪ್ರಾಚೀನ ಭಾರತ ವರ್ಷ ಕೀ ಸಭ್ಯತಾ ಕಾ ಇತಿಹಾಸ’ ಪುಸ್ತಕದ ಪುಟಸಂಖ್ಯೆ 28 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

11) ಬ್ರಾಹ್ಮಣರಾದ *ಬಾಬು ಶ್ಯಾಮಸುಂದರವರು ಬರೆದ #ಹಿಂದಿಭಾಷೇಚಾ_ವಿಕಾಸ್’ ಪುಸ್ತಕದ ಪುಟಸಂಖ್ಯೆ 3 ಮತ್ತು 8 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

12) ಬ್ರಾಹ್ಮಣರಾದ ಪಂಡೀತ್ *ಲಕ್ಷ್ಮೀನಾರಾಯಣ ಗರ್ದೇ* ಬರೆದ ಪುಸ್ತಕ #ಹಿಂದುತ್ವ ದ ಪುಟ ಸಂಖ್ಯೆ 7,9 ಮತ್ತು 29 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

13) ಬ್ರಾಹ್ಮಣರಾದ ಸ್ವಾಮಿ ಸತ್ಯದೇವ *ಪರಿಭಾಜಕ ಅವರ ಪುಸ್ತಕ #ಜಾತಿ_ಶಿಕ್ಷಾ ಪುಟ ಸಂಖ್ಯೆ;7 ಮತ್ತು 9 ರಲ್ಲಿ ಆರ್ಯರು ವಿದೇಶಿಗರೆಂದು ದಾಖಲಿಸಿದ್ದಾರೆ.

14) ಬ್ರಾಹ್ಮಣರಾದ *ವಿ.ಡಿ.ಸಾವರ್ಕರ್* ಬರೆದ ಪುಸ್ತಕ #ಹಿಂದುತ್ವದ ಪುಟ ಸಂಖ್ಯೆ 5 ರಲ್ಲಿ ಆರ್ಯರು ವಿದೇಶದಿಂದ ಬಂದವರು ಎಂದು ದಾಖಲಿಸಿದ್ದಾರೆ.

ಇದೆಲ್ಲದಕ್ಕೂ ಮಿಗಿಲಾದದ್ದು ಡಿ.ಎನ್.ಎ. ಪರೀಕ್ಷೆ.. ಇದರ ವರದಿ ನೋಡೋಣ ಬ್ರಾಹ್ಮಣರು ವಿದೇಶಿಗಳೋ ಅಥವಾ ದಲಿತರು ವಿದೇಶಿಗಳೋ ಗೊತ್ತಾಗುತ್ತೆ ಅಲ್ವಾ..

1) #ಮೈಕಲ್_ಬಾಮ್ಶ್ಯಾದ್ ಎಂಬ D.N.A.ವಿಜ್ಞಾನಿಯು ಪ್ರಪಂಚದ ಎಲ್ಲಾ ದೇಶಗಳ D.N.A. ಸಂಗ್ರಹ ಮಾಡಿ ಭಾರತದಲ್ಲಿನ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ D.N.A. ಜೊತೆಗೆ ಹೊಂದಾಣಿಕೆ ಮಾಡಿ 2001ರಲ್ಲಿ ಒಂದು ರಿಪೋರ್ಟ ರೆಡಿ ಮಾಡಿದನು ಆ ರಿಪೋರ್ಟನಲ್ಲಿ ಭಾರತದ ಬ್ರಾಹ್ಮಣರು ಭಾರತದ ಮೂಲನಿವಾಸಿಗಳಲ್ಲ ಅವರು ಯುರೇಷಿಯಾದಲ್ಲಿರುವ ವಿದೇಶಿಗರಾಗಿದ್ದಾರೆಂದು ದಾಖಲಿಸಿದ್ದಾರೆ. ಆ ರಿಪೋರ್ಟ್ ನ ಒಂದು ಪ್ರತಿ ನನ್ನ ಹತ್ತಿರ ಇದೆ.

ಇದರಿಂದ ವಿಚಲಿತರಾದ ಆರ್.ಎಸ್.ಎಸ್.ನವರು ವಸಂತ ಶಿಂಧೆ ಎನ್ನುವ ಪೂನಾದ ಡಖ್ಖನ್ ಕಾಲೇಜಿನ ಪ್ರಾಧ್ಯಾಪಕನಿಗೆ ಅಧಿಕಾರದ ಆಸೆ ತೋರಿಸಿ ಆ ಮೂಲಕ ಭಾರತೀಯ ಬ್ರಾಹ್ಮಣರ D.N.A. ಟೆಷ್ಟ್ ಮಾಡಿಸಿ 2014 ರಲ್ಲಿ ವರದಿ ತಯಾರಿಸಿ ಬ್ರಾಹ್ಮಣರೂ ಭಾರತೀಯರೇ ಎಂದು ವರದಿ ಬರೆಯಿಸಿ ಪತ್ರಿಕೆಗೆಳಲ್ಲಿ ಬರೆಸಿದರು.
ಇದು ಸುಳ್ಳು ವರದಿ ಎಂದು ವಿದೇಶಿ ವಿಜ್ನಾನಿಗಳು ಉಗಿದಿದ್ದು ಇನ್ನೂ ಯಾರೂ ಮರೆತಿಲ್ಲ.!

2) #ಸರ್_ಮಾರ್ಟರ್ಮರ್ ವಿಲ್ಲರ್ (1890-1976) ಎಂಬ ಭಾರತೀಯ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನೆರಲ್ ಅಧಿಕಾರಿಯು 1966 ರಲ್ಲಿ ಸಿಂಧೂ ನಾಗರಿಕತೆಯ ಬಗ್ಗೆ ಭೂ ಉತ್ಖನನ ಮಾಡಿ ” ಸಿವಿಲಾಯಿಜೇಶನ ಆಫ್ ದಿ ಇಂಡಸ್ ವ್ಯಾಲಿ ಆ್ಯಂಡ್ ಬೀಯಾಂಡ್ ” ಒಂದು ಗ್ರಂಥ ಬರೆದಿದ್ದಾರೆ.
ಇದರಲ್ಲಿ ವಿದೇಶಿ ಬ್ರಾಹ್ಮಣರು ಸಿಂಧೂ ನಾಗರಿಕತೆಯ ಮೇಲೆ ದುರಾಕ್ರಮಣ ಮಾಡಿ ಹಿಂಸೆ ಮಾಡಿದ ಪ್ರಯುಕ್ತ ಸಿಂಧೂ ನಾಗರಿಕತೆ ನಾಶವಾಗಿದೆ ನಾಗ ಜನರ ಸಂಸ್ಕ್ರುತಿ ಹಾಳಾಗಿದೆ ಎಂದು ದಾಖಲಿಸಿದ್ದಾರೆ.

3) 2019 ರಲ್ಲಿ #ಟೋನಿ_ಜೋಷಫ್ D.N.A ಆಧಾರಿತ ತಮ್ಮ ಸಂಶೋಧನಾ ಕೃತಿಯಲ್ಲಿ ಆರ್ಯರು ಮಧ್ಯ ಏಷ್ಯಾದ ಸ್ಟೆಫ್ ಪ್ರದೇಶದಿಂದ ಭಾರತಕ್ಕೆ ವಲಸೆ ಬಂದಿರುವುದಾಗಿ ದಾಖಲಸಿದ್ದಾರೆ.

ಹೀಗೆ ಬ್ರಾಹ್ಮಣರೇ ಬರೆದಿರುವ ಮೇಲ್ಕಂಡ ಪುಸ್ತಕಗಳಲ್ಲಿ ಹಾಗೂ D.N.A ವರದಿಯನ್ನು ಅವಲೋಕನ ಮಾಡಿದಾಗ ಭಾರತದಲ್ಲಿರುವ ಬ್ರಾಹ್ಮಣರು ಕ್ರಿ.ಪೂ.2000 -2500ರ ಕಾಲಘಟ್ಟದಲ್ಲಿ ಭಾರತಕ್ಕೆ ವಲಸೆ ಬಂದಿರುವುದಾಗಿ ಆಕರಗಳು ಸಾರಿ ಸಾರಿ ಹೇಳುತ್ತಲಿವೆ.

ಇಷ್ಟಾದರೂ ಬಿ.ಎಲ್. ಸಂತೋಷ ತಾನೊಬ್ಬ ವಿದೇಶಿ ಆರ್ಯಬ್ರಾಹ್ಮಣನಾಗಿದ್ದು ಈ ದೇಶದ ಮೂಲನಿವಾಸಿ ಜನಾಂಗವಾದ ಎಸ್ಸಿ. ಎಸ್ಟಿ. ಮತ್ತು ಓಬಿಸಿ. ಜನಾಂಗದವರನ್ನು ವಿದೇಶಿಯರೆಂದು ಬೊಬ್ಬೆ ಹಾಕುತ್ತಲಿದ್ದಾನೆಂದರೆ ಆತ ಚರಿತ್ರೆಯ ಅರಿವಿರದ #ಪುಂಗಿದಾಸ ಎನ್ನಬೇಕಾಗುತ್ತದೆ.

ವಿಠ್ಠಲ_ವಗ್ಗನ್ ಲೇಖಕರು, ಕಲಬುರಗಿ

ನಾಗರಾಜ್ ಪಿ.ಎನ್

Related Articles

Leave a Reply

Your email address will not be published. Required fields are marked *

Back to top button