ಇತಿಹಾಸ

ಲಿಂಗಾಯತ ಮತ್ತು ವೀರಶೈವ: ಒಂದು ಗುಣಾತ್ಮಕ ತುಲನೆ

ಚರ್ಚೆಗಾಗಿ

Spread the love

ಲಿಂಗಾಯತ ಮತ್ತು ವೀರಶೈವ: ಒಂದು ಗುಣಾತ್ಮಕ ತುಲನೆ

ವೀರಶೈವರು ಎಂದರೆ ೧೫-೧೬ ನೇ ಶತಮಾನದಲ್ಲಿ ವಿಜಯನಗರ ಅರಸರ ಆಡಳಿತದಲ್ಲಿ ತಮಿಳು ಶ್ರೀವೈಷ್ಣವರ ದಬ್ಬಾಳಿಕೆಗೆ ಹೆದರಿ ಕರ್ನಾಟಕಕ್ಕೆ ವಲಸೆ ಬಂದು ಲಿಂಗಾಯತ ಧರ್ಮಕ್ಕೆ ಮತಾಂತರಗೊಂಡ ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರು. ಲಿಂಗಾಯತ ಧರ್ಮದ ಮೂಲ ಆಶಯಗಳಿಗೆ ವಿರುದ್ಧವಾದ ಆಗಮಿಕ ವೀರಶೈವ ಆರಾಧ್ಯರು ಮತ್ತು ಬಸವಪ್ರಣೀತ ಲಿಂಗಾಯತರ ನಡುವಿನ ಮೂಲಭೂತ ವ್ಯತ್ಯಾಸಗಳು ಹೀಗಿವೆ:

೧. ವೀರಶೈವ ಆಚಾರ್ಯ/ಆರಾಧ್ಯರಿಗೆ ಮೌಢ್ಯˌ ಅಜ್ಞಾನˌ ಶಿವಾಗಮಗಳು ಮತ್ತು ಕಾಲ್ಪನಿಕ ಪುರಾಣಗಳೇ ತಳಹದಿ.

ಲಿಂಗಾಯತರಿಗೆ ವೈಚಾರಿಕತೆˌ ವೈಜ್ಞಾನಿಕತೆˌ ವಚನಗಳು ಮತ್ತು ಇತಿಹಾಸವೇ ತಳಹದಿ.

೨. ವೀರಶೈವ ಆಚಾರ್ಯ/ಆರಾಧ್ಯರು ಕರ್ಮ ಸಿದ್ಧಾಂತವನ್ನು ನಂಬುತ್ತಾರೆ.

ಲಿಂಗಾಯತರು ಕಾಯಕವನ್ನು ಅನುಸರಿಸುತ್ತಾರೆ.

೩. ವೀರಶೈವ ಆಚಾರ್ಯ/ಆರಾಧ್ಯರು ಅಸಮಾನತೆˌ ತಾರತಮ್ಯ ˌ ಜಾತಿಪದ್ದತಿಯನ್ನು ಒಪ್ಪಿ ಅನುಸರಿಸುತ್ತಾರೆ.

ಲಿಂಗಾಯತರು ಸಮಾನತೆ ಹಾಗೂ ಸಹೋದರತ್ವದಲ್ಲಿ ನಂಬಿಕೆ ಇಡುತ್ತಾರೆ.

೪. ವೀರಶೈವ ಆಚಾರ್ಯ/ಆರಾಧ್ಯರು ಮುಗ್ಧ ಮನುಷ್ಯರ ಹೆಗಲ ಮೆಲೇರಿ ಅಡ್ಡ ಪಲ್ಲಕ್ಕಿಯಲ್ಲಿ ಕುಳಿತು ಆಕಾಶದಲ್ಲಿ ಅಟ್ಟಹಾಸಗೈಯುತ್ತಾರೆ.

ಲಿಂಗಾಯತರು ನೆಲದ ಮೇಲೆ ನಿಂತುಕೊಂಡು ಎಲ್ಲರೊರಡೆ ವಿನಮ್ರವಾಗಿ ವ್ಯವಹರಿಸುತ್ತಾರೆ.

೬. ವೀರಶೈವ ಆಚಾರ್ಯ/ಆರಾಧ್ಯರು ಸನಾತನ ಬ್ರಾಹ್ಮಣ ಧರ್ಮದ ವರ್ಣಾಶ್ರಮ ಪದ್ಧತಿಯನ್ನು ಒಪ್ಪುತ್ತಾರೆ.

ಲಿಂಗಾಯತರು ಚಾತುರ್ವರ್ಣ ವ್ಯವಸ್ಥೆಯನ್ನು ದಿಕ್ಕರಿಸುತ್ತಾರೆ.

೬. ವೀರಶೈವ ಆಚಾರ್ಯ/ಆರಾಧ್ಯರು ಸನಾತನ ಬ್ರಾಹ್ಮಣರಂತೆ ವೇದಗಳನ್ನು ನಂಬಿ ತಮ್ಮನ್ನು ತಾವು ವೇದಮೂರ್ತಿಗಳೆಂದು ಕರೆದುಕೊಳ್ಳುತ್ತಾರೆ.

ಲಿಂಗಾಯತರು ವೇದಗಳನ್ನು ನಂಬುವುದಿಲ್ಲ.

೭. ವೀರಶೈವ ಆಚಾರ್ಯ/ಆರಾಧ್ಯರು ತಾವೇ ಶ್ರೇಷ್ಠರು ಹಾಗೂ ಲಿಂಗಾಯತರಿಗೆ ಗುರುಗಳೆಂದು ಅಹಂಕಾರ ಮೆರೆಯುತ್ತಾರೆ.

ಲಿಂಗಾಯತರು ಶರಣ ತತ್ವದ ಹಿರಿಮೆಯಂತೆ ‘ಎನಗಿಂತ ಕಿರಿಯರಿಲ್ಲ’ ಎನ್ನುವ ಬಸವ ವಾಣಿ ಅನುಸರಿಸುತ್ತಾರೆ.

೮. ವೀರಶೈವ ಆಚಾರ್ಯ/ಆರಾಧ್ಯರು ವರ್ಣ-ವರ್ಗ-ಲಿಂಗಾಧಾರಿತ ಶೋಷಣೆಯನ್ನು ಬೆಂಬಲಿತ್ತಾರೆ. ಪುರೋಹಿತಶಾಹಿಯಂತೆ ದುಡಿಯದೆ ತಿನ್ನುತ್ತಾರೆ.

ಲಿಂಗಾಯತರು ಶ್ರಮ ಮತ್ತು ದುಡಿಮೆಯಲ್ಲಿ ವಿಶ್ವಾಸವಿಡುತ್ತಾರೆ.

೯. ವೀರಶೈವ ಆಚಾರ್ಯ/ಆರಾಧ್ಯರು ಬಹುದೇವೊಪಾಸನೆ ಹಾಗೂ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಡುತ್ತಾರೆ.

ಲಿಂಗಾಯತರು ಏಕದೇವೋಪಾಸಕರು ಹಾಗೂ ವಿಗ್ರಹ ಆರಾಧಕರಲ್ಲ.

೧೦. ವೀರಶೈವ ಆಚಾರ್ಯರು/ಆರಾಧ್ಯರು ಹೋಮ ಹವನˌ ಯಜ್ಞ ˌ ಯಾಗˌ ಜಪ ಪತˌ ಮೈಡಿ ಮೈಲಿಗೆ ಆಚರಿಸುತ್ತಾರೆ.

ಲಿಂಗಾಯತರು ಈ ಸನಾತನ ಬ್ರಾಹ್ಮಣ್ಯದ ಮೌಢ್ಯಗಳಿಂದ ದೂರವಿರುತ್ತಾರೆ.

೧೧. ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕೃತಿಯು ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಗುರುಸಿತಿಕೊಳ್ಳುವುದು ಬಿಟ್ಟರೆ ಬೇರೆ ಎಲ್ಲಿಯೂ ಜನಪ್ರೀಯವಾಗಿಲ್ಲ.

ಲಿಂಗಾಯತ ಸಂಸ್ಕೃತಿಯು ವಿಶ್ವದಾದ್ಯಂತ ತನ್ನ ಉದಾತ್ ವಿಚಾರಗಳಿಂದ ಜನರನ್ನು ಆಕರ್ಶಿಸಿದೆ.

೧೨. ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕ್ರತಿಯು ಸಮಾಜಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ.

ಲಿಂಗಾಯತ ಸಂಸ್ಕೃತಿಯು ತನ್ನ ಕಾಯಕ ಮತ್ತು ದಾಸೋಹ ಸೂತ್ರಗಳ ಮೂಲಕ ಬಹುಜನರ ಏಳಿಗೆಗೆ ಅನನ್ಯ ಕಾಣಿಗೆ ನೀಡಿದೆ.

೧೩. ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕ್ರತಿಯು ಜನರನ್ನು ವಿಭಜಿಸುತ್ತದೆ.

ಲಿಂಗಾಯತ ಸಂಸ್ಕ್ರತಿಯು ಜನರನ್ನು ಬೆಸೆಯುತ್ತದೆ.

೧೪. ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕ್ರತಿ ಮಾನವ ಘನತೆˌ ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಜನತಂತ್ರದಲ್ಲಿ ನಂಬಿಕೆ ಇಡುವುದಿಲ್ಲ.

ಲಿಂಗಾಯತ ಸಂಸ್ಕ್ರತಿಯು ಪ್ರಜಾಪ್ರಭುತ್ವವಾದಿ ಸಂಸ್ಕೃತಿ.

೧೫. ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕ್ರತಿಯು ಸಂಸ್ಕ್ರತ ಮೂಲದ ಶಿವಾಗಮ ಆಧಾರಿತ ಸಿದ್ಧಾಂತ ಶಿಖಾಮಣಿಯಲ್ಲಿ ಶ್ರದ್ಧೆ ಹೊಂದಿದ್ದು ಅದು ಸ್ಥಳೀಯ ಜನಸಾಮಾನ್ಯರಾಡುವ ಕನ್ನಡ ಭಾಷೆಯಲ್ಲಿ ಯಾವುದೇ ಸಾಹಿತ್ಯ ಹೊಂದಿಲ್ಲ.

ಲಿಂಗಾಯತರಿಗೆ ಭವ್ಯವಾದ ವಚನ ಸಾಹಿತ್ಯ ಹಾಗೂ ಶರಣ ಸಂಸ್ಕೃತಿಯ ಹಿನ್ನೆಲೆಯಿದೆ.

೧೬. ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕ್ರತಿಯು ತೆಲಗು ಮೂಲದ ಲಿಂಗಿ ಬ್ರಾಹ್ಮಣ ಹಿನ್ನೆಲೆ ಹೊಂದಿದೆ.

ಲಿಂಗಾಯತ ಸಂಸ್ಕ್ರತಿಯು ಕನ್ನಡ ಮಣ್ಣಿನ ಶ್ರಮ ಸಂಸ್ಕ್ರತಿಯ ಶರಣರ ಹಿನ್ನೆಲೆ ಹೊಂದಿದೆ.

ಒಟ್ಟಾರೆ ವೀರಶೈವ ಆಚಾರ್ಯ/ಆರಾಧ್ಯ ಸಂಸ್ಕ್ರತಿಯವರು ವೀರಶೈವ ಆರಾಧ್ಯ ಬ್ರಾಹ್ಮಣರು/ಲಿಂಗೀಬ್ರಾಹ್ಮಣರೇ ಹೊರತು ಲಿಂಗಾಯತರಲ್ಲ.

ಶರಣ ಸಂಸ್ಕ್ರತಿಯ ವಾರಸುದಾರರು ಅಪ್ಪಟ ಬಸವ ಪ್ರಣೀತ ಲಿಂಗಾಯತರೇ ಹೊರತು ವೀರಶೈವರಲ್ಲ.

~ ಡಾ. ಜೆ ಎಸ್ ಪಾಟೀಲ.

Related Articles

Leave a Reply

Your email address will not be published. Required fields are marked *

Back to top button