ನಿಮ್ಮೆಲ್ಲರ ಸಹಾಯ ಸಹಕಾರ ಇರಲಿ…..

ಬಸವಮಾರ್ಗಕ್ಕೆ
ನಿಮ್ಮೆಲ್ಲರ ಸಹಾಯ ಸಹಕಾರ ಇರಲಿ
ಬಸವಣ್ಣ ಲೋಕ ಕಂಡ ಅತ್ಯದ್ಭುತ ವ್ಯಕ್ತಿಗಳಲ್ಲಿ ಒಬ್ಬರು. ಬಸವಣ್ಣನವರ ವಿಚಾರ ಸ್ಪರ್ಶಕ್ಕೆ ಬಂದ ವ್ಯಕ್ತಿಗಳೆಲ್ಲರೂ ಶರಣರೆ ಆದರು.
ಕಾರ್ತೀಕದ ಕತ್ತಲಲ್ಲಿ ಮೂಡಿ ಬಂದ ಬೆಳಕಿನ ಹೊಳೆ ಬಸವಣ್ಣ. ಶತ ಶತಮಾನಗಳಿಂದ ಶೋಷಿತ ಜನಾಂಗದ ಕಣ್ಣು ತೆರೆಸಿದ ಅಣ್ಣ ಬಸವಣ್ಣ. ಮಹಿಳೆಯರ ಪರವಾಗಿ ನಿಂತು, ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂಬ ಸತ್ಯ ಸಾರಿ ಹೇಳಿದ ವಾಸ್ತವವಾದಿ.
https://youtu.be/Dct8SP1x26s?si=VQILsaDojnBVHkk6
ದಯವಿಲ್ಲದ ಧರ್ಮವನ್ನು ತಿರಸ್ಕರಿಸಿ ದಯಾ ಮೂಲವಾದ ಲಿಂಗಾಯತ ಧರ್ಮವನ್ನು ಕಟ್ಟಿದ ಧರ್ಮ ಗುರು ಬಸವಣ್ಣ. ಸ್ಥಾವರ ದೇವರನ್ನು ದೂರ ತಳ್ಳಿ, ಇಷ್ಟಲಿಂಗವನ್ನು ಕರುಣಿಸಿದ ಕರುಣಾಮಹಿ ಬಸವಣ್ಣನವರು.
ಮಾಹಾ ಮನವತಾವಾದಿ, ವಿಶ್ವ ಗುರು ಅಪ್ಪ ಬಸವಣ್ಣನವರನ್ನು ಶಬ್ದಗಳಲ್ಲಿ, ಬರೆಹಗಳ ಮೂಲಕ ಹಿಡಿದಿಡಲು ಸಾಧ್ಯವಿಲ್ಲ. ಆದರೂ ಒಂದು ಸಣ್ಣ ಪ್ರಯತ್ನವನ್ನು ಬಸವಮಾರ್ಗ ಡಾಟ ಕಾಂ ಮೂಲಕ ಮಾಡಬೇಕೆಂಬ ಹಂಬಲ ನನಗೆ. ಇದಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಇರಲಿ.
ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿರಿ.
ಇತಿ ನಿಮ್ಮ
ವಿಶ್ವಾರಾಧ್ಯ ಸತ್ಯಂಪೇಟೆ
ಯಶಸ್ವಿಯಾಗಲಿ