ಪ್ರಚಲಿತ ಸಂಗತಿ

ತೇಜಸ್ವಿ ಕೊನೆಯ ದಿನ, ಏನಾಯ್ತ?

Spread the love

ತೇಜಸ್ವಿ ಕೊನೆಯ ದಿನ, ಏನಾಯ್ತ?

ದಿನಾಂಕ 5/04/2007, ಗುರುವಾರದಂದು ತೇಜಸ್ವಿರವರು ನಮ್ಮನ್ನು ಅಗಲಿದ ದಿನ. ಅವರ ಆ ದಿನ ಹೀಗೆ ಕೊನೆಯಾಗಿತ್ತು.

 

ಅಂದು ತೇಜಸ್ವಿ ಕಾರಿನಲ್ಲಿ ತಮ್ಮ ಮೊಮ್ಮಗಳಾದ ವಿಹಾಳನ್ನೂ ಜೊತೆಗೆ ಕರೆದುಕೊಂಡು ಮೂಡಿಗೆರೆ ಪಟ್ಟಣಕ್ಕೆ ಹೊರಟರು. ಅಲ್ಲಿ ತಮ್ಮ ತೋಟದ ಕೆಲಸಗಾರರಿಗೆ ಬಟವಾಡೆ ಮಾಡಲು ಬ್ಯಾಂಕ್ ನಲ್ಲಿ ಒಂದಷ್ಟು ಕೆಲಸ ಮುಗಿಸಿಕೊಂಡು, ತಮ್ಮ ನೆಚ್ಚಿನ ಬಿರಿಯಾನಿ ಕಟ್ಟಿಸಿಕೊಂಡು ಮನೆಗೆ ಹಿಂತಿರುಗಿ ಬರುವಾಗ, ಟಿ.ವಿ.ರಿಪೇರಿ ಅಂಗಡಿಯ ಸುರೇಂದ್ರ ಎಂಬುವವರು ತೇಜಸ್ವಿಯವರನ್ನು ಅಂಗಡಿಗೆ ಕರೆದರಂತೆ.ಅವರು “ಸಾರ್, ಕುವೆಂಪುರವರ ವಿಶ್ವಮಾನವ ಸಂದೇಶವನ್ನು ನಿಮ್ಮ ಬಾಯಲ್ಲೇ ಕೇಳಬೇಕೆಂದಿದ್ದೆ.ಇವತ್ತು ಹೇಳಿ ಸಾರ್” ಅಂದರಂತೆ. ತೇಜಸ್ವಿ ರವರು ವಿವರವಾಗಿ ವಿಶ್ವಮಾನವ ಸಂದೇಶವನ್ನು ಹೇಳಿದರಂತೆ. ಅಂಗಡಿಯವರು “ಸಾರ್, ನನ್ನ ಬಹು ದಿನದ ಆಸೆ ಇಂದು ಪೂರೈಸಿತು” ಎಂದು ತೃಪ್ತಿ ಪಟ್ಟು ಕೊಂಡರಂತೆ.

ನಂತರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಮನೆಗೆ ಬಂದ ತೇಜಸ್ವಿ ರವರು ತಮ್ಮ ಮನೆಯವರೊಂದಿಗೆ ಸಂಭಾಷಿಸುತ್ತ ಬಿರಿಯಾನಿ ತಿಂದು ಸಂತೋಷ ಪಟ್ಟರು.

ಊಟವಾದ ನಂತರ ಏನಾಯ್ತು ಎನ್ನುವುದನ್ನ ರಾಜೇಶ್ವರಿ ತೇಜಸ್ವಿ ರವರ ಮಾತಿನಲ್ಲೇ ತಿಳಿಯೋಣ.

“ನಾನೇನೋ ಚೆನ್ನಾಗಿ ಊಟ ಮಾಡಿರುವೆನೆಂದು” ಹೇಳುತ್ತಾ ಹೋದರು.

“ಆ ಕೂಡಲೇ ಆಕಾಶದೆತ್ತರಕ್ಕೆ ಬೆಳೆದ ದೊಡ್ಡ ಮರವೊಂದು ಬಿದ್ದ ಸದ್ದಾಯಿತು. ‘ಅಯ್ಯೋ…! ನಿಮ್ಮಣ್ಣ ಬಿದ್ದರೆಂದು ಕಾಣುತ್ತೆ ಕಣೆ ಈಶಾ…..’ ಎಂದು ಓಡಿದೆ. ಅವಳೂ ಬಂದಳು, ಎದೆ ಒತ್ತಿದಳು. ನಾನು ಮುಖಕ್ಕೆ ನೀರು ಸಿಂಪಡಿಸಿದೆ. ನೀರು ಕುಡಿಸಿದೆ ಎಚ್ಚರವಾಗಬಹುದೆಂದು. ಎರಡು ಸಲ ತಲೆ ಆಡಿಸಿದ್ದೇ ಕೊನೆಯಾಯ್ತು.

ನನಗೆ ಎಲ್ಲೋ ಅಂತರಾಳದ ತಳದಲ್ಲಿ…… ವಿಹಾ ಕಿಟಾರನೆ ಚೀರಿದಳು…..

ನನ್ನ ತೇಜಸ್ವಿ ಕಾಡಿನ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ, ನನಗೆ ಅವರು ಬೇಕು……”😓😓😓

ಹೀಗೆ ತೇಜಸ್ವಿರವರೊಂದಿಗೆ ಕಳೆದ ಕೊನೆ ಕ್ಷಣಗಳನ್ನು ರಾಜೇಶ್ವರಿ ತೇಜಸ್ವಿರವರು ತಮ್ಮ “ನನ್ನ ತೇಜಸ್ವಿ” ಪುಸ್ತಕದಲ್ಲಿ ವಿವರಿಸಿದ್ದಾರೆ.

ತೇಜಸ್ವಿರವರು ತಮ್ಮ ಸಾಹಿತ್ಯದ ಮೂಲಕ, ವಿಚಾರಗಳ ಮೂಲಕ ಈಗಲೂ ನಮ್ಮ ಮನಸ್ಸಿನಲ್ಲಿ ಜೀವಂತರಾಗಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಅವರೇ ತಮ್ಮ ಅಳಿಯ ರವರೊಂದಿಗೆ ಮಾತನಾಡುತ್ತಾ ಮಾಯಾಲೋಕ ಪುಸ್ತಕದ ಕುರಿತು ಮಾತನಾಡುತ್ತಾ “ಒಂದೊಳ್ಳೆ ಪುಸ್ತಕ ಬರೀತಾ ಇದೀನಿ ಕಣಯ್ಯ… ಎಲ್ಲಾ ನನ್ನ ತಲೇಲಿದೆ. ಇನ್ನೊಂದು ವಾರದಲ್ಲಿ ಅದ್ಭುತವಾದ ಪುಸ್ತಕ ತಯಾರಾಗತ್ತೆ” ಎಂದು ಹೇಳಿದ್ದರಂತೆ. ಮಾಯಾಲೋಕ ಪುಸ್ತಕದ ಒಂದು ಸಂಪುಟ ಬಿಡುಗಡೆಯಾಯಿತಾದರೂ, ಮತ್ತಷ್ಟು ಸಂಪುಟಗಳಲ್ಲಿ ಆ ಪುಸ್ತಕವನ್ನು ಹೊರತರ ಬೇಕೆಂದಿದ್ದ ಇನ್ನೆಷ್ಟು ವಿಷಯಗಳು ಅವರೊಂದಿಗೆ ಲೀನವಾದವೋ ಬಲ್ಲವರಾರು.

ಮಾಯಾಲೋಕ ಒಂದೇ ಅಲ್ಲ…. ಬಹಳಷ್ಟು ವಿಚಾರಗಳಲ್ಲಿ ತೇಜಸ್ವಿ ರವರ ಸಾವು ಬಹು ದೊಡ್ಡ ನಷ್ಟ ಎಂಬುದು ಅಕ್ಷರಶಃ ಸತ್ಯ. 80, 90 ರ ದಶಕಗಳಲ್ಲಿ ಬರೆದ ಅದೆಷ್ಟೋ ವಿಷಯಗಳು ಈಗಲೂ ಪ್ರಸ್ತುತವಾಗಿವೆ. ಆದ್ದರಿಂದಲೆ ಅವರನ್ನು ‘ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ’ ಎಂದು ಕರೆದಿರುವುದು.

DM for Credits.

Related Articles

One Comment

  1. ಗುರುಲಿಂಗಪ್ಪ ಹೊಗತಾಪುರ ಬೀದರ ನಗರಜಿಲ್ಲೆ says:

    ಗದ್ಯಸಾಹತ್ಯದಲ್ಲಿ ಮೇರು ವ್ಯಕ್ತಿತ್ವಕ್ಕೆ ಎರಿದ ತೇಜಸ್ವಿರವರನ್ನು ಮರೆಯಲು ಹೇಗೆಸಾಧ್ಯ.

Leave a Reply

Your email address will not be published. Required fields are marked *

Back to top button