
ತರಾತುರಿಯಲ್ಲಿ ಯಾವ ನಿರ್ಣಯವನ್ನೂ ತೆಗೆದುಕೊಳ್ಳಬಾರದು. ಯಾವುದೆ ಸುತ್ತೋಲೆ ಹೊರಡಿಸುವುದಕ್ಕಿಂತ ಮುಂಚೆ ಈ ಬಗ್ಗೆ ಸಾರಾ ಸಾರಾ ವಿಚಾರ ಮಾಡಬೇಕು. ಆದರೆ ಶ್ರೀ.ಶಂಕರ ಬಿದರಿಯವರು ಅ.ಭಾ.ಲಿಂಗಾಯತ,/ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಮೇಲೆ ಬಸವ ಜಯಂತೋತ್ಸವದ ದಿನ ರೇಣುಕಾಚಾರ್ಯರ ಜಯಂತಿಯನ್ನೂ ಆಚರಿಸಲು ಸುತ್ತೋಲೆ ಹೊರಡಿಸಿದ್ದರು.
ಈ ಸುತ್ತೋಲೆ ಇಡೀ ನಾಡಿನಾದ್ಯಂತ ಬಸವಣ್ಣನವರ ಅನುಯಾಯಿಗಳು ಮತ್ತು ಲಿಂಗಾಯತರ ತೀವ್ರವಾದ ಆಕ್ರೋಶಕ್ಕೆ ಕಾರಣವಾಗಿತ್ತು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ವೀರಶೈವ ಮತ್ತು ಲಿಂಗಾಯತರು ಇಬ್ಬರೂ ಒಂದೇ ಎಂದು ಹೇಳಿತ್ತಾರೆಂದು ಶ್ರೀ ಬಿದರಿಯವರು ಹೇಳುತ್ತ ತಮ್ಮ ಸುತ್ತೋಲೆಯನ್ನು ಸಮರ್ಥಿಸಿಕೊಂಡಿದ್ದರು.
ಆದರೆ ಇದನ್ನು ಸಾಮಾನ್ಯ ಜ್ಞಾನ ಇರುವ ಯಾರೊಬ್ಬರೂ ಒಪ್ಪಲು ಸಾಧ್ಯವಿಲ್ಲ. ಬಸವ ಜಯಂತಿಯಲ್ಲಿ ರೇಣುಕಾಚಾರ್ಯರ ಜಯಂತಿ ಮಾಡಲು ಹೇಳಿವ ಬಿದರಿ ಸಾಹೇಬರು, ರೇಣುಕಾಚಾರ್ಯರ ಜಯಂತಿಯಲ್ಲಿ ಬಸವ ಜಯಂತಿ ಮಾಡುವರೆ ? ಇದು ಅಸಾಧ್ಯ ಮಾತು.
ಒಂದು ಕಡೆ ಇತಿಹಾಸ ಪುರುಷ. ಇನ್ನೊಂದು ಕಡೆ ಪೌರಾಣಿಕ ವ್ಯಕ್ತಿ. ಒಂದು ಗೌವ್ವೆನ್ನುವ ಕತ್ತಲು, ಇನ್ನೊಂದು ಕಡೆ ಪ್ರಜ್ವಲಿಸುವ ಬೆಳಕು. ಒಬ್ಬರು ಉತ್ತರ ಇನ್ನೊಬ್ಬರು ದಕ್ಷಿಣ. ಎರಡು ವ್ಯಕ್ತಿತ್ವಗಳು ಒಂದು ಕಡೆ ಸೇರಲು ಸಾಧ್ಯವೆ ?
ಈ ಬಗ್ಗೆ ಸರಿಯಾಗಿ ಅರಿತುಕೊಳ್ಳದ ಬಿದರಿಯವರು ತಮ್ಮ ಪೊಲೀಸ್ ದಾಟಿಯಲ್ಲಿ ಸಮಾಜದಲ್ಲಿ ಸುತ್ತೋಲೆ ಹೊರಡಿಸಿ ತೀವ್ರ ಮುಖಭಂಗಕ್ಕೆ ಒಳಗಾದರು. ಬಸವ ಭಕ್ತರು ಇಷ್ಟೆಲ್ಲ ಗೌರವದಿಂದ ಅವರೊಂದಿಗೆ ವರ್ತಿಸಿ ಪ್ರತಿಭಟಿಸಿದರೂ ಅವರು ಕ್ಯಾರೆ ಅನ್ನಲಿಲ್ಲ. ಹಲವಾರು ಕಡೆ ಪ್ರತಿಭಟನೆಗಳನ್ನು ಎದುರಿಸಬೇಕಾಯ್ತು. ಪ್ರಸ್ತುತ ಸುತ್ತೋಲೆ ವಾಪಸ್ ಪಡೆಯದಿದ್ದರೆ ಮುಂದೆ ಬಿದರಿಯವರು ಹೋದಲ್ಲಿ ಬಂದಲ್ಲೆಲ್ಲ ತೀವ್ರ ಮುಖಭಂಗಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಡಾ.ಬಸವಲಿಂಗ ಪಟ್ಟದ್ದೇವರು ಮುದ್ದಾಂ ಅವರೊಂದಿಗೆ ಮಾತನಾಡಿದರೂ ಸಹ ಅವರು ತಮ್ಮ ಸುತ್ತೋಲೆ ವಾಪಾಸ್ ಪಡೆಯುವ ಸಾಧ್ಯತೆಯನ್ನು ಅಲ್ಲಗಳೆದಿದ್ದರು. ಇದರಿಂದ ಕುಪಿತರಾದ ಬಸವ ಭಕ್ತರು ಶ್ರೀ.ಶಂಕರ ಬಿದರಿ ಮತ್ತು ಅ.ಭಾ.ವೀರಶೈವ ಮಹಾಸಭಾ ಕಚೇರಿಯ ಮುಂದುಗಡೆ ಪ್ರತಿಭಟನೆ ಮಾಡುವ ಯೋಚನೆ ಹೊಂದಿದ್ದರು.
ಬಸವ ಭಕ್ತರ ಸಾತ್ವಿಕ ಕೋಪವನ್ನು ಸಚಿವ ಈಶ್ವರ ಖಂಡ್ರೆಯವರು ನಿನ್ನೆ ದಿನ ಅನುಭವಿಸಿದ್ದರು. ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದರು.
ಕೊನೆಯ ಹಂತ ಎಂಬಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ.ಶಾಮನೂರು ಶಿವಶಂಕರಪ್ಪನವರು ಆ ಸುತ್ತೋಲೆಯನ್ನು ವಾಪಾಸ ಪಡೆಯುವ ಮೂಲಕ ಬಸವ ಭಕ್ತರಿಗೆ ಹರ್ಷವನ್ನುಂಟು ಮಾಡಿದ್ದಾರೆ.
ಬಸವ ಶಕ್ತಿಯ ಎದುರುಗಡೆ ತರಗಲೆಗಳು ರೋಯ್ಯನೆ ಹಾರಿ ಹೋಗುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
– ರವೀಂದ್ರಕುಮಾರ
ಕೊನೆಗೂ ನಮ್ಮ ಶ್ಯಾಮನೂರಜ್ಜ ತನ್ನಲ್ಲಿ ಇನ್ನೂ
ವುಳಿ ಕಡಿಮೆಯಾಗಿಲ್ಲ ಅಂತ ಪ್ರೂವ್ ಮಾಡೇಬಿಡ್ತು!