ಮಾನವೀಯತೆ

ದುಬೈ ಪ್ರವಾಸದಲ್ಲಿ ಪಾಕಿಸ್ತಾನದ ಡ್ರೈವರ ನಹೀಮಸಾಬ

ನನ್ನ ಪ್ರವಾಸ ಅನುಭವ

Spread the love

ದೇಶ ತಿರುಗು ಇಲ್ಲವೆ ಕೋಶ ಓದು ಎಂಬ ಗಾದೆಯ ಮಾತೊಂದು ಇದೆ. ಜೊತೆಗೆ ಈ ಜೀವನ ನೀರ ಮೇಲಿನ ಗುಳ್ಳೆಯಂತೆ ಯಾವತ್ತು ಥಟ್ಟನೆ ಒಡೆದು ಹೋಗುತ್ತದೊ ಗೊತ್ತಿಲ್ಲ. ಸಾಧ್ಯವಾದಷ್ಟು ದೇಶಗಳನ್ನು ತಿರುಗಿ ಅಲ್ಲಿಯ ಸಂಸ್ಕೃತಿಯನ್ನು ಕಣ್ಣಾರೆ ನೋಡಬೇಕು. ತಿಳಿದುಕೊಂಡು ಬದಲಾಗಬೇಕು ಎಂಬ ಉಮೇದು ನನಗೆ. ಆದ್ದರಿಂದ ನಾನು ಆಗಾಗ ದೇಶ ದೇಶಗಳನ್ನು ತಿರುಗುತ್ತ ಹೋಗುವ ಅಲೆಮಾರಿ.

ಬಹಳ ವರ್ಷಗಳಿಂದ ದುಬೈ ನೋಡಬೇಕು ಎಂಬ ಹಂಬಲ.ಈ ನಗರದ ಬಗ್ಗೆ ಬಣ್ಣ ಬಣ್ಣದ ಮಾತುಗಳನ್ನು ಕೇಳಿದ್ದೆ. ಆಗಾಗ ಯೂಟ್ಯೂಬ್‌ಗಳಲ್ಲೂ ನೋಡಿದ್ದೆ. ಆದರೆ ಕಣ್ಣಿಗೆ ಕಂಡಾಗ ಆಗುವ ಆನಂದವೆ ಬೇರೆ. ನನ್ನೊಂದಿಗೆ ಟೂರ್ ಮಾಡಲು ನನ್ನ ಆತ್ಮೀಯ ಬಳಗವನ್ನು ಕೇಳಿಕೊಂಡೆ. ಅವರವರವು ಅವರದೆ ಆದ ಕೆಲಸಗಳು. ಆದ್ದರಿಂದ ಅನಿವಾರ್ಯವಾಗಿ ನನ್ನ ಹೆಂಡತಿ ಮಕ್ಕಳೊಂದಿಗೆ ದುಬೈಗೆ ಕಾಲಿಟ್ಟೆ.

Oplus_16908288

ದುಬೈ ಏರ್ ಪೋರ್ಟಗೆ ಹೋಗುತ್ತಲೆ ನನಗಾಗಿ ಏಜೆನ್ಸಿಯವರು ಗೊತ್ತು ಮಾಡಿದ್ದ ಕಾರ  ಚಾಲಕ ನಹೀಮ ಸಾಬ ಕಾಯುತ್ತ ನಿಂತಿದ್ದ. ಅಬುದಾಬಿಗೆ ಇಲ್ಲಿಂದ ಎರಡು ಗಂಟೆಯ ದಾರಿ. ದಾರಿಯುದ್ದಕ್ಕೂ ನಹೀಮಸಾಬನೊಂದಿಗೆ ಮಾತಾಡುತ್ತ ನಡೆದೆ. ಹಲವಾರು ಅಚ್ಚರಿಯ ಸಂಗತಿಗಳು ಹೇಳಿದ. ಸರ್, ಲೋಕಲ್ ನಲ್ಲಿ ಶೇಖ್ ಜನಗಳಿದ್ದಾರೆ. ಅವರೆಲ್ಲ ಕೆಲಸ ಮಾಡುವವರಲ್ಲ. ಅವರು ನಮ್ಮಂಥವರಿAದ ಕೆಲಸ ಮಾಡಿಸಿಕೊಳ್ಳುವವರು. ಸುಮಾರು ಒಂದು ಕೋಟಿ ಜನ ಸಂಖ್ಯೆ ದೇಶ ಇದು. ಇಲ್ಲಿ ೯೦ ಲಕ್ಷ ಜನ ಹೊರಗಿನವರು. ೧೦ ಲಕ್ಷ ಮಾತ್ರ ಸ್ಥಳಿಯರು ಇದ್ದಾರೆ. ಇದರಲ್ಲಿ ೫೦ % ಭಾರತೀಯರು. ಉಳಿದವರು ಪಾಕಿಸ್ತಾನ ,ಬಾಂಗ್ಲಾ ದೇಶ ಮತ್ತು ಇತರರು ಬಂದು ವಾಸವಾಗಿದ್ದಾರೆ.

Oplus_16908288

ದುಬೈನ ರಾಜರುಗಳು ಆರಂಭದಲ್ಲಿ ಕಷ್ಟದ ದಿನಗಳನ್ನು ಕಳೆದವರು. ಈಗ ಅವರ ಶ್ರೀಮಂತಿಕೆ ಲೆಕ್ಕ ಹಾಕುವಂತ್ತಿಲ್ಲ. ಹೇಳಿ ಕೇಳಿ ಈ ದೇಶ ಮರುಭೂಮಿ. ಇಲ್ಲಿ ಯಾವ ಪದಾರ್ಥಗಳೂ ಬೆಳೆಯಲಾಗದು. ಬರೀ ಉಸುಕಿನಲ್ಲಿ ಏನಾದರೂ ಬೆಳೆಯಲು ಸಾಧ್ಯವೆ ? ಬರೀ ಖರ್ಜೂರವನ್ನು ಮಾತ್ರ ಬೆಳೆಯುತ್ತಾರೆ. ಇದೊಂದು ಬೆಳೆಯಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ೧೦% ಪೆಟ್ರೋಲಿಯಮ್ ಉತ್ಪನ್ನ ಬರಬಹುದು. ಆದರೆ ಇದೆಲ್ಲ ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗುತ್ತದಲ್ಲವೆ ? ಇದೆಲ್ಲವನ್ನು ಸೂಕ್ಷö್ಮವಾಗಿ ಗಮನಿಸಿದ ಈ ರಾಜರುಗಳು ಬರೀ ಮರುಭೂಮಿಯಲ್ಲಿ ಅಲ್ಲವುದ್ಧೀನನ ಅದ್ಭುತ ದೀಪವೊಂದನ್ನು ಕಂಡುಕೊAಡಿದ್ದಾರೆ. ತಮ್ಮ ದೇಶದ ಪ್ರತಿಯೊಂದು ನಗರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ವಿಶ್ವದ ಬೇರೆ ಬೇರೆ ಕಡೆಯ ಜನ ಹೆಚ್ಚು ಹೆಚ್ಚಾಗಿ ಪ್ರವಾಸಕ್ಕಾಗಿಯೆ ಈ ದೇಶಕ್ಕೆ ಬರುತ್ತಾರೆ. ಅಬುದಾಬಿಯಲ್ಲಿ ಕೇವಲ ಒಂದು ದಿನ ನೋಡಲು ಸಾಕಾಗದಷ್ಟು ಪ್ರವಾಸಿ ತಾಣಗಳು ನಮ್ಮನ್ನು ಸೆಳೆಯುತ್ತವೆ. ವಾರನ್ ಬ್ರಾಸ, ಸಿ. ವರ್ಲ್ಡ, ಪೆರಾರಿ ವರ್ಲ್ಡ,ವಾಟರ್ ವರ್ಲ್ಡ ಇತ್ಯಾದಿಗಳಿವೆ.

ದುಬೈನಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ ಖಲೀಫಾ, ವಿಶ್ವದ ಅತಿ ದೊಡ್ಡ ಶಾಪಿಂಗ್ ಮಾಲ್, ಮರಳಿನಲ್ಲಿ ಡರ‍್ಟ್ ಸಫಾರಿ, ಬೆಲ್ಲಿ ಡ್ಯಾನ್ಸ್, ಐಯಾನ್ ವಿಶ್ವವಿದ್ಯಾಲಯ, ಗ್ಲಾಸ್ ಸ್ಲೆöÊಡಿಂಗ್ ಬಿಲ್ಡಿಂಗ್- ದುಬೈ ಫ್ರೇಮ್, ಫ್ಯೂಚರ್ ಮ್ಯೂಜಿಯಮ್ ಏನೆಲ್ಲವನ್ನೂ ನಾವು ಕಾಣಬಹುದಾಗಿ.

ನಾನು ದುಬೈ ನೋಡುವ ಸಂದರ್ಭಕ್ಕೆ ಸರಿಯಾಗಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಯುದ್ಧದಲ್ಲಿ ತೊಡಗುವ ಮುನ್ಸೂಚನೆ ದೊರಕಿತ್ತು. ನಹೀಮ ಸಾಬ ಹೇಳಿ ಕೇಳಿ ಪಾಕಿಸ್ತಾನಿ. ಆದ್ದರಿಂದ ಆತನಿಗೆ ನೇರವಾಗಿಯೆ,ನಿಮ್ಮ ದೇಶದಲ್ಲಿ ನಮ್ಮ ಭಾರತದ ಬಗೆಗೆ ಯಾವ ಅಭಿಪ್ರಾಯ ಇದೆ ? ಎಂದೆ. ನಮ್ಮ ದೇಶ ಪಾಕಿಸ್ತಾನ ಮತ್ತು ಭಾರತ ಮೊದಲು ಅಖಂಡವಾಗಿಯೆ ಇದ್ದವು. ಈಗಲೂ ನಮ್ಮಲ್ಲಿನ ಜನಗಳು ಭಾರತವನ್ನು ವೈರಿಗಳ ರಾಷ್ಟçವೆಂದು ತಿಳಿದುಕೊಂಡಿಲ್ಲ. ಆದರೆ ರಾಜಕಾರಣಿಗಳು ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶ ದೇಶದ ನಡುವೆ ವೈರತ್ವವನ್ನು ಸೃಷ್ಟಿಸುತ್ತಿದ್ದಾರೆ. ಜನ ಸಾಮಾನ್ಯರಿಗೆ ಇದಾವುದೂ ಬೇಡವಾಗಿದೆ. ಸ್ವತಃ ನನ್ನ ಅನುಭವವನ್ನೇ ಆಧರಿಸಿ ಹೇಳುವುದಾದರೆ ಪಾಕಿಸ್ತಾನದಲ್ಲಿ ಪ್ರತಿಶತ ನೂರಕ್ಕೆ ೯೦ ರಷ್ಟು ಜನ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿದ್ದೆವು. ಆದರೆ ಚುನಾವಣೆ ಫಲಿತಾಂಶ ಮಾತ್ರ ಜನಾಭಿಪ್ರಾಯಕ್ಕೆ ವಿರೋಧವಾಗಿ ಬಂತು. ನಮ್ಮಲ್ಲಿನ ಸೈನ್ಯಾಧಿಕಾರಿಗಳು ಚುನಾಯಿತ ಸರಕಾರವನ್ನು ನಿರ್ಧರಿಸುವಷ್ಟು ಪ್ರಭಾವಶಾಲಿಯಾಗಿವೆ. ಇಮ್ರಾನಖಾನ ಅಧಿಕಾರಕ್ಕೆ ಬಂದಾಗ ಆತಂಕವಾದಿಗಳನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದ್ದ. ದೇಶವನ್ನು ಆರ್ಥಿಕ ಸಂಕಟದಿAದ ಪಾರು ಮಾಡಲು ಆರಂಭಿಸಿದ್ದ. ಜನ ಸಾಮಾನ್ಯರಿಗೂ ಇದು ಬೇಕಾಗಿತ್ತು. ಆದರೆ ಕೆಲವು ಆತಂಕವಾದಿಗಳಿಗೂ ಹಾಗೂ ಅಲ್ಲಿನ ಸೈನಾಧಿಕಾರಿಗಳಿಗೆ ಇದು ಬೇಕಾಗಿಲ್ಲ. ಇದೆಲ್ಲವನ್ನು ಕಂಡು ರೋಸಿ ಹೋಗಿರುವ ಬಲೂಚಿಸ್ತಾನದ ಜನಗಳು ಪ್ರತ್ಯೇಕ ರಾಷ್ಟçಕ್ಕಾಗಿ ಈಗಾಗಲೆ ಹೋರಾಟದಲ್ಲಿ ತೊಡಗಿದ್ದಾರೆ. ೩೫ % ಸಂಪದ್ಭರಿತವಾಗಿರುವ ಬಲೂಚಿಸ್ತಾನ ಹೋದರೆ ಅಲ್ಲಿ ಉಳಿಯುವುದೇನು ?

ಪಾಕ್ ಆಕ್ರಮಿತ ಕಾಶ್ಮೀರದ ಜನಗಳ ಸ್ಥಿತಿ ಚಿಂತಾಜನಕವಾಗಿದೆ. ಅವರೂ ಸಹಿತ ಪಾಕಿಸ್ಥಾನದಲ್ಲಿ ಉಳಿದುಕೊಳ್ಳಲು ಬಯಸಿಲ್ಲ. ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನ ಕಾಲು ಕೆದರಿ ಭಾರತದ ಜೊತೆಗೆ ಯುದ್ಧ ಮಾಡಲು ತೊಡಗುತ್ತೇವೆ ಎನ್ನುವುದು ನನಗೆ ಆಶ್ಚರ್ಯವಾಗಿ ಕಾಣಿಸುತ್ತದೆ.

ಭಾರತದ ಪ್ರಜೆಗಳಾದ ನಮ್ಮೊಂದಿಗೆ ಏಳು ದಿನಗಳ ಕಾಲ ಕಾರ್ ಚಾಲಕ ಆಗಿ ನಿಯುಕ್ತಿಗೊಂಡಿದ್ದ ನಹೀಮ ಸಾಬನ ನಡವಳಿಕೆ ಕುರಿತು ಕಿಂಚಿತ್ತೂ ಅನುಮಾನ ಮೂಡಲಿಲ್ಲ. ನನ್ನನ್ನು ಸಾಹೇಬ ಎಂದು, ಮಕ್ಕಳನ್ನು ಗುಡಿಯಾ,ದೋಸ್ತ ಎಂದು ಕರೆಯುವ ಮೂಲಕ ತನ್ನ ಬಾಂಧವ್ಯ ಬೆಸೆದುಕೊಂಡಿದ್ದ.

ಗುಂಡಣ್ಣ ಕಲಬುರ್ಗಿ, ಯಾದಗಿರಿ

Leave a Reply

Your email address will not be published. Required fields are marked *

Back to top button