
ಶಹಾಪುರ : ೨೩ : ಪಟ್ಟಣದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಶಹಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಸವಣ್ಣನವರ ಜಯಂತೋತ್ಸವದ ಅಂಗವಾಗಿ ಇದೆ ದಿ.೨೫/೪/೨೦೨೫ ಶುಕ್ರವಾರ ಸಾಯಂಕಾಲ ತಿಂಗಳ ಬಸವ ಬೆಳಕು -೧೨೫ ಏರ್ಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ್ಯೋತಿ ಪ್ರಜ್ವಲನೆಯನ್ನು ರುದ್ರಗೌಡ ಪಾಟೀಲ ಕಾಖಂಡಕಿ ಅವರು ವಹಿಸಲಿದ್ದಾರೆ. ಹನ್ನೆರಡನೆಯ ಶತಮಾನದ ಬಸವಣ್ಣನವರು ಹಾಗೂ ಇತರ ಶರಣರು ಬರೆದಿರುವ ವಚನಗಳ ಕುರಿತು ಅಜೇಂದ್ರ ಸ್ವಾಮೀಜಿ ಏಕದಂಡಗಿ ಮಠ ಅವರು ಅನುಭಾವ ನೀಡಲಿದ್ದಾರೆ.
ಇದೆ ಸಂದರ್ಭದಲ್ಲಿ ರುದ್ರಗೌಡ ಪಾಟೀಲರು ಬರೆದ ಸದ್ಧರ್ಮ ಶರಣ ಮಲ್ಲಪ್ಪ ತಾತ ಎಂಬ ಕೃತಿಯೂ ಬಿಡುಗಡೆ ಹಮ್ಮಿಕೊಳ್ಳಲಾಗಿದೆ.
ಭೀಮರಾಯ ಗುಳೇದ ಶಿರವಾಳ ಮತ್ತು ಬಸವಮಾರ್ಗದ ಚಿಣ್ಣರರು ವಚನಗಳನ್ನು ಹಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಡಾ.ಶಿವರಂಜನ ಸತ್ಯಂಪೇಟೆ, ಶಿವಣ್ಣ ಇಜೇರಿ ಮಾಡಲಿದ್ದಾರೆ.
ದಾಸೋಹವನ್ನು ರುದ್ರಗೌಡ ಪಾಟೀಲ ಬಂಧುಗಳು ನಡೆಸಿಕೊಡಲಿದ್ದಾರೆ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕರಾದ ವಿಶ್ವಾರಾಧ್ಯ ಸತ್ಯಂಪೇಟೆ ತಿಳಿಸಿದ್ದಾರೆ.