ಪ್ರಚಲಿತ ಸಂಗತಿ

ಸಾರ್ ನಮ್ಮ ಪ್ರಾಣ ಹೋದ್ರು ಸರಿ touristಗಳಿಂದ ಏನು ಆಗಲು ಬಿಡಲ್ಲ

ಹೃದಯ ಹಿಂಡುವ ರಕ್ತದೋಕುಳಿ

Spread the love

“ಸಾರ್ ನಮ್ಮ ಪ್ರಾಣ ಹೋದ್ರು ಸರಿ touristಗಳಿಂದ ಏನು ಆಗಲು ಬಿಡಲ್ಲ” , ಕಾಶ್ಮೀರ ಪ್ರವಾಸ ಹೋಗಿದ್ದಾಗ ಅಲ್ಲಿನ ಡ್ರೈವರ್ ನನಗಿದನ್ನು ಹೇಳಿದ, ಅವನ ಮಾತಿನಲ್ಲಿ ಬೂಟಾಟಿಕೆ ಇರಲಿಲ್ಲ ಹಾಗಂತ ವೈಯಕ್ತಿಕವಾಗಿ ನನ್ನ ಮೇಲೆ ವಿಶೇಷ ಮಮಕಾರ ಇತ್ತು ಅಂತಲ್ಲ ಆದರೆ ನಮ್ಮಂತ ಪ್ರವಾಸಿಗರು ಇಲ್ಲದಿದ್ದರೆ ಅವರು ಹಸಿದು ಮಲಗಬೇಕಾಗುತ್ತದೆ, ಏಕೆಂದರೆ ಕಾಶ್ಮೀರಿ ಆಪಲ್, ಕ್ರಿಕೆಟ್ ಬ್ಯಾಟ್, ಕೇಸರಿ ಮತ್ತು ಡ್ರೈ ಫ್ರೂಟ್ಸ್ ಉದ್ಯಮ ಅಲ್ಲಿನ elite / ಶ್ರೀಮಂತ ಕಾಶ್ಮೀರಿಗಳ ಹೊಟ್ಟೆ ತುಂಬಿಸಿದರೆ ಅಲ್ಲಿನ ಬಡ ಕಾಶ್ಮೀರಿಗಳು ಅವಲಂಬಿತ ಆಗಿರೋದೆ ಪ್ರವಾಸೋದ್ಯಮದ ಮೇಲೆ. ಕಾರ್ ಡ್ರೈವರ್, ಟೂರ್ ಗೈಡ್, ಕುದುರೆ, ಸ್ಲೇಡ್ಜ್ ರೈಡ್, ಶಾಲು ಸ್ವೆಟರ್ ಮಾರುವವ ಹೀಗೆ ಅಲ್ಲಿನ ಬಹುದೊಡ್ಡ ಜನಸಂಖ್ಯೆಯ ಜನರಿಗೆ ಅನ್ನ ಹುಟ್ಟುವುದೆ ಪ್ರವಾಸಿಗರಿಂದ. ಹೀಗಾಗಿ ಆತ ಹೇಳಿದ್ದು ಸತ್ಯ, ಅವರ ಪ್ರಾಣಕ್ಕೆ ಕುತ್ತು ಬಂದರು ಪ್ರವಾಸಿಗರಿಗೆ ಏನು ಆಗಲು ಬಿಡುವುದಿಲ್ಲ, ಇದೇ ಕಾರಣಕ್ಕೆ ನೆನ್ನೆಯವರೆಗೆ ಪ್ರವಾಸಿಗರು ಅಲ್ಲಿ ಸತ್ತಿದ್ದು ಬಹಳ ಕಡಿಮೆ. ಆದರೆ…

ನೆನ್ನೆ ಪಹಲ್ಗಾಮ್ ಅಲ್ಲಿ ನಡೆದದ್ದು ಘೋರ ದುರಂತ, ಪ್ರವಾಸಿಗರನ್ನು ತಮ್ಮ ಪ್ರಾಣ ಕೊಟ್ಟಾದರು ಉಳಿಸಿಕೊಳ್ಳುತ್ತೀವಿ ಅಂತ ಕಾಶ್ಮೀರಿಗಳು ಹೇಳುವಾಗ ಇಂತಹ ಘಟನೆ ಆಗಿದ್ದು ಹೇಗೆ? ಅದು ನೂರನೂರು ಮೀಟರ್ ದೂರದಲ್ಲಿಯೂ ಆರ್ಮಿ ಅವರು ನಿಂತಿರುವಾಗ? ಕಾಶ್ಮೀರ ಪ್ರವಾಸ ಅಂದರೆ ಮುಖ್ಯವಾಗಿ ಶ್ರೀನಗರ, ಗುಲ್ಮಾರ್ಗ್, ಸೊಂಮಾರ್ಗ್ ಮತ್ತು ಪಹಲ್ಗಾಮ್ ಈ ನಾಲ್ಕು ಜಾಗಕ್ಕೆ ಬಹುತೇಕ ಜನ ಹೋಗೋದು. ಅದರಲ್ಲಿ ಶ್ರೀನಗರ, ಗುಲ್ಮಾರ್ಗ್, ಸೋನಮಾರ್ಗ್ ಕಾಶ್ಮೀರದ ಮುಖ್ಯ ಭಾಗದಲ್ಲಿ ಇದ್ದರೆ ಈ ಪಹಲ್ಗಾಮ್ ಮಾತ್ರ ಶ್ರೀನಗರದಿಂದ ಜಮ್ಮುವಿಗೆ ಹೋಗುವ ದಾರಿಯಲ್ಲಿ ಇರುವುದು, ಶ್ರೀನಗರದಿಂದ ಇಲ್ಲಿಗೆ 2 ಗಂಟೆಯ ಪ್ರಯಾಣ. ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಕಳೆದ ಹಲವು ವರ್ಷಗಳಿಂದ ಉಗ್ರರ ಚಟುವಟಿಕೆ ಕಾಶ್ಮೀರದಿಂದ ಜಮ್ಮುವಿಗೆ ಶಿಫ್ಟ್ ಆಗೋಗಿದೆ, ಭೌಗೋಳಿಕವಾಗಿ ಜಮ್ಮು ಹತ್ತಿರವಿಲ್ಲದಿದ್ದರೂ ಜಮ್ಮುವಿನ ವೈಶ್ನೋದೇವಿ ಮತ್ತು ಪಹಲ್ಗಾಮ್ ನಡುವೆ ಯಾವುದೇ ಪ್ರವಾಸಿ ತಾಣವಿಲ್ಲ! ಪ್ರವಾಸಿ ತಾಣವಿಲ್ಲವೆಂದಮೇಲೆ ಈ ಮದ್ಯದ ಹಳ್ಳಿಗಳ ಜನ ಪ್ರವಾಸಿಗರ ಮೇಲೆ ಅವಲಂಬಿತವೂ ಆಗಿಲ್ಲ ಸ್ವಾಭಾವಿಕವಾಗಿ ಪ್ರವಾಸಿಗರ ಮೇಲೆ ಸಾಫ್ಟ್ ಕಾರ್ನರ್ ಸಹ ಇರುವುದಿಲ್ಲ. ಉಗ್ರರಿಗೆ ಬೇಕಾಗಿರೋದು ಇಂತಹ ಜಾಗಗಳೇ!

https://youtu.be/6qx3qPviS3o

ಇಲ್ಲಿ ಮೇಲ್ನೋಟಕ್ಕೆ ಎರಡು ಆಯಾಮ ಕಾಣಿಸುತ್ತದೆ,

1) ಸ್ಥಳೀಯರ ಸಪೋರ್ಟ್ ಇಲ್ಲದೆ ಇಂತಹ ಕೃತ್ಯ ಮಾಡೋದು ಕಷ್ಟ ಆದರೆ ಇಂತಹ ಕೃತ್ಯಗಳಿಗೆ ಅಲ್ಲಿನ ಸ್ಥಳೀಯರು ಕೈ ಜೋಡಿಸಿ ತಮ್ಮ ಹೊಟ್ಟೆ ಮೇಲೆ ತಾವೇ ಕಲ್ಲು ಹಾಕಿಕೊಳ್ತಾರ, ಸಾಧ್ಯತೆ ತುಂಬಾ ಕಡಿಮೆ. ಆದರೆ ನಾನು ಮೊದಲೇ ಹೇಳಿದಂತೆ ಪಹಲ್ಗಾಮ್ ಹೊರತಾದ ಮಿಕ್ಕ ಹಳ್ಳಿಗಳು ಪ್ರವಾಸಿಗರ ಅವಲಂಬನೆಯೇ ಇಲ್ಲದಿರುವುದರಿಂದ, ಭಾರತದಲ್ಲಿ ನಡೆಯುತ್ತಿರುವ ಬಲಪಂಥೀಯ ಕೋಮುವಾದವನ್ನ ತೋರಿಸಿ ಎತ್ತಿಕಟ್ಟೋದು ಸುಲಭ, ಒಬ್ಬ ಕಳ್ಳನಿಗೆ ಇನ್ನೊಬ್ಬ ಕಳ್ಳನ ಬಗ್ಗೆ ಬೇಗ ಗೊತ್ತಾಗುತ್ತದಲ್ಲ ಹಾಗೆ ಮೊದಲೇ ಧರ್ಮದ ಅಮಲಿನಲ್ಲಿ ಇರುವ ಮುಸ್ಲಿಮರನ್ನು ಇದನ್ನೆಲ್ಲ (ಹಿಂದುತ್ವ) ಹೇಳಿ ತಲೆ ಕೆಡಿಸೋದು ಕಷ್ಟವೇ ಅಲ್ಲ.

2) ನುಸುಳುಕೋರರು ರಾತ್ರೋರಾತ್ರಿ ನುಗ್ಗಿ ದಾಳಿ ಮಾಡಿದ್ದಾರೆ ಅನ್ನಲು ಪಹಲ್ಗಾಮ್ ಭಾರತದ ಗಡಿ ಪ್ರದೇಶವಲ್ಲ ಮತ್ತು ಇತ್ತೀಚಿನ almost ಎಲ್ಲಾ ಉಗ್ರ ಚಟುವಟಿಕೆ ನಡೆದಿರುವುದು ಜಮ್ಮು ಅಥವಾ ಜಮ್ಮು ಮತ್ತು ಪಹಲ್ಗಾಮ್ ಮಧ್ಯೆ ಇರುವ ಹಳ್ಳಿಗಳಲ್ಲೇ ಹೊರತು ಮುಖ್ಯ ಕಾಶ್ಮೀರದಲ್ಲಿ ಅಲ್ಲ. ಕಮ್ಮಿ ಜನಸಂಖ್ಯೆ ಇರುವ ಇಂತಹ ಊರುಗಳಲ್ಲಿ ಉಗ್ರ ಚಟುವಟಿಕೆ / ಪ್ಲಾನ್ ನಡೆಯುತ್ತಿರುವಾಗ ಅದು Intelligence ಅವರಿಗೆ ತಿಳಿಯದಿರುವುದು ಹೇಗೆ? ಅದೇನು ವೀರಪ್ಪನ್ ಇದ್ದಂತಹ ದಟ್ಟ ಕಾಡಲ್ಲ, ಬರಡು ಭೂಮಿ ಜೊತೆಗೆ ಪ್ರತಿ ನೂರು ಮೀಟರ್ ದೂರದಲ್ಲಿ ಆರ್ಮಿಯವರಿರುತ್ತಾರೆ ಹೀಗಿದ್ದರೂ ಬಂದೂಕು ಮತ್ತಿತರ ವಸ್ತುಗಳು / ನುಸುಳುಕೊರರು ಬಂದಿದ್ದು ಹೇಗೆ?

ಗುಡ್ಡದ ಮೇಲೆ ಇರುವ ಬೈಸರನ್ ವ್ಯಾಲಿ / Mini Switzerland ಅನ್ನೇ ಆಯ್ಕೆಮಾಡಿಕೊಳ್ಳಲು ಇನ್ನೊಂದು ಕಾರಣವೆಂದರೆ ಅಲ್ಲಿಗೆ ಕಾಲ್ನಡಿಗೆ / ಕುದುರೆಯಲ್ಲೇ ಹೋಗಬೇಕು ಇನ್ನೊಂದು ಬದಿಯಲ್ಲಿ ಗಾಡಿ ಹೋಗುವಂತ ದಾರಿಯಿದ್ದರೂ ಮುಕ್ಕಾಲು ದಾರಿಗೆ ಅದು ಮುಗಿಯುತ್ತದೆ ಇದೇ ಕಾರಣಕ್ಕೆ ಉಗ್ರರು ಈ ಜಾಗವನ್ನು ಆಯ್ಕೆ ಮಾಡಿರುವುದು. ನಾನು ಮುಂಚೆಯೇ ಹೇಳಿದ ಹಾಗೆ ಪಹಲ್ಗಾಮ್ ಗಡಿ ಪ್ರದೇಶ ಅಲ್ಲ, ಹೀಗಿರುವಾಗ ಉಗ್ರರು ದೇಶ ಬಿಟ್ಟು ಹೋಗಿರಲು ಸಾಧ್ಯವೇ ಇಲ್ಲ, ಬರಡು ಪ್ರದೇಶವಾಗಿರುವುದರಿಂದ ಅವರನ್ನು ಹಿಡಿಯುವುದು ಇಚ್ಛಾಶಕ್ತಿ ಇದ್ದರೆ ಕಷ್ಟವೇನಲ್ಲ.

  1. ಇದು Intelligence failure, ಸುಮ್ಮನೆ ಭಾಷಣ ಮಾಡದೆ Intelligenceನ ನಟ್ಟು ಬೋಲ್ಟ್ ಟೈಟ್ ಮಾಡದಿದ್ದರೆ ಮುಂದೆ ವೈಶ್ನೋದೇವಿ, ಅಮರನಾಥ್ ಯಾತ್ರೆ ಉಗ್ರರ ನೆಕ್ಸ್ಟ್ ಟಾರ್ಗೆಟ್ ಆಗುತ್ತದೆ. ಹೋದ ಜೀವಗಳಂತು ವಾಪಸ್ ಬರೋದಿಲ್ಲ, ಆದರೆ ಇದಕ್ಕೆ ಕಾರಣರಾದ ಉಗ್ರರನ್ನು ಮತ್ತು ಅದಕ್ಕೆ ಕೈ ಜೋಡಿಸಿದ ಸ್ಥಳೀಯರನ್ನು ಹುಡುಕಿ ಬೀಜ ಒಡೆಯದಿದ್ದರೆ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿರುತ್ತದೆ. ಕಾಶ್ಮೀರ ನೋಡಲು ಸ್ವರ್ಗದಂತೆಯೇ ಇದೆ, ನಾನು ಇದುವರೆಗೂ ನೋಡಿರುವ ಜಾಗಗಳಲ್ಲೇ ಅತ್ಯಂತ ಸುಂದರ ಪ್ರದೇಶವದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಆ ಸ್ವರ್ಗವನ್ನು ಮತ್ತೆ ನೋಡುವ ಅವಕಾಶ ನಮಗೆ ಸಿಗದಿರಬಹುದು.
  2. ೦ ಅನಿಲಕುಮಾರ ಎಂ

Related Articles

Leave a Reply

Your email address will not be published. Required fields are marked *

Back to top button