ಇತಿಹಾಸ

ರೈತ ಸಂಘದ ಸಲಾದಪುರ ಶರಣಪ್ಪನವರ ಕುರಿತು

ಮರೆತ ಮಾತು

Spread the love

ಶ್ರೀ ವಿಶ್ವಾರಾಧ್ಯ ಅಣ್ಣನವರೆ,

ಈ ಒಂದು ನಿಮ್ಮ ವಿಡಿಯೋದಲ್ಲಿ ಪ್ರೊಫೆಸರ್ ನಂಜುಂಡ ಸ್ವಾಮಿ ಮತ್ತು ತಮ್ಮ ತಂದೆ ಲಿಂಗಣ್ಣ ಸತ್ಯಂ ಪೇಟೆರವರ ನಡುವಿನ‌ ಗೆಳೆತನ ಮತ್ತು ಅಂದಿನ ರೈತ ಸಂಘದ ಹೋರಾಟದ ಕುರಿತು ಮಾತಾನಡಿದ್ದಿರಿ, ಮತ್ತು ನಿಮ್ಮ ತಂದೆಯವರ ಬರಹ ರಾಜ್ಯ ಮಟ್ಟದಲ್ಲಿ ರೈತ ಸಂಘಕ್ಕೆ ಶಕ್ತಿ ತುಂಬಿರುವದು ಮತ್ತು ಅವರ ಬರಹವನ್ನು ಹೋರಾಟದ ಹಾಡುಗಾರ ಶ್ರೀ ಮೈಲಾರಪ್ಪ ಸಗರ ರವರು ಹಾಡಿ ಹೋರಟಕ್ಕೆ ಸ್ಪೂರ್ತಿದಾಯಕರಾಗಿದ್ದರು ಎಂಬುವದು ನಮಗೆ ಬಹಳ ಹೆಮ್ಮೆಯ ಸಂಗತಿ ಎನಿಸಿ, ರೈತ ಸಂಘದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಮೂಡಿಸುತ್ತದೆ. ಹಾಗೆಯೆ ಅದೆ ಕಾಲಘಟ್ಟದಲ್ಲಿ ಸಗರನಾಡಿನಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ರೈತ ಸಂಘವನ್ನು ಕಟ್ಟಿದ ರೈತ ಹೋರಾಟಾಗಾರರಾದ ಶ್ರೀ ಶರಣಪ್ಪ ಅಣ್ಣಾ ಸಲಾದಪೂರ ರವರು ೧೯೯೧ರಲ್ಲಿ ರೈತ ಸಂಘದ ಸಮಾವೇಶವನ್ನು ಶಹಾಪೂರದ ನಗರ ಸಭೆಯಲ್ಲಿ ಆಯೋಜಿಸಿರುತ್ತಾರೆ ಆ ಸಭೆಯನ್ನು ಪ್ರೊಫೆಸರ್ ನಂಜುಂಡ ಸ್ವಾಮಿಯವರೆ ಉದ್ಘಾಟಿಸಿರುತ್ತಾರೆ, ನಂಜುಂಡ ಸ್ವಾಮಿಯವರು ಬಹುಷ್ಯ ಶಹಾಪುರಕ್ಕೆ ಬಂದಿದ್ದು ಅದೆ ಮೊದಲು ಮತ್ತು ಅದೆ ಕೊನೆಯಂದು ಅನಿಸುತ್ತದೆ, ಆದಾದ ನಂತರ ಅದೇ ರೈತ ಸಂಘದಿಂದಲೆ ೧೯೮೯ ಮತ್ತು ೧೯೯೪ ರಲ್ಲಿ ಶರಣಪ್ಪ ಸಲಾದಪೂರ ರವರು ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದಾರೆಂದು ನಮಗೆ ದಾಖಲೆಗಳಿಂದ ತಿಳಿದು ಬರುತ್ತದೆ. ತಮ್ಮ ತಂದೆಯವರು ಪ್ರಕರ ಬರಹಗಾರರು ಮತ್ತು ವಾಗ್ಮೀಮಿಗಳಾಗಿದ್ದರೆಂದು ತಿಳಿದಿದ್ದೇವೆ ಮತ್ತು ಈ ವಿಡಿಯೋ ಮೂಲಕನು ತಿಳಿದು ಬರುತ್ತದೆ.

ಹೀಗಿರುವಾಗ ರೈತ ಸಂಘವನ್ನು ಎರಡು ಬಾರಿ ರೈತ ಸಂಘದಿಂದಲೆ ಚುನಾವಣೆಯನ್ನು ಎದುರಿಸಿದ ಅಂದಿನ ರೈತ ಸಂಘದ ಅಭ್ಯಾರ್ಥಿ ಮತ್ತು ಅಂದಿನ ಸಗರನಾಡಿನ ರೈತ ಚಳುವಳಿಗಾರರ ಕುರಿತು ಬರಹವನ್ನು ಮಾಡಿರುತ್ತಾರೆಂದು ಕಂಡು ಬರುತ್ತದೆ ಅಂತಹ ಬರಹವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸ ಲಿಂಗಣ್ಣ ಸತ್ಯಂ ಪೇಟೆಯವರ ಮಗನಾಗಿ ತಾವು ಮಾಡುವ ಮೂಲಕ ಇಂದಿನ ರೈತ ಹೋರಾಟಗಾರರಿಗೆ ಸ್ಪೂರ್ತಿಯಾಗಬೇಕು ಎಂಬುವದು ಇಂದಿನ ಅನೇಕ ಯುವಕರ ಆಶೆಯವಾಗಿದೆ.ಯಾಕಂದರೆ ತಂದೆಯಂತೆ ತಾವು ಸಹ ಪ್ರಗತಿಪರ ಚಿಂತಕರು ಬರಹಗಾರರು ಮತ್ತು ಪ್ರಕರ ವಾಗ್ಮೀಗಳು ಆಗಿರುವದರಿಂದ ನಿಮ್ಮಿಂದ ನಾವು ನೀರಿಕ್ಷೆ ಮಾಡುತ್ತೆವೆ ,ಒಂದುವೇಳೆ  ಈಗಾಲೆ ಆ ಕೆಲಸ ಮಾಡಿದ್ದರೆ ಅದನ್ನು ಮತ್ತೆ ಸಾಮಾಜಿಕ ಮಾಧ್ಯಮಗಳಿಂದ ಪ್ರಚಾರ ಪಡಿಸಿದರೆ ನಮ್ಮಂತ ಯುವಕರು ತಿಳಿದುಕೊಳ್ಳಲು ಸಹಕಾರವಾಗುವುದು.

– ಶ್ರೀಶೈಲ ಬಿರಾದಾರ ನಾಗನಟಗಿ 9008659817

Related Articles

Leave a Reply

Your email address will not be published. Required fields are marked *

Back to top button