ಚರ್ಚೆಗಾಗಿಪ್ರಚಲಿತ ಸಂಗತಿ

ಬಿದರಿಯವರೆ ಲಿಂಗಾಯತರು ಇಂದು ದಿಕ್ಕು ತಪ್ಪುವವರಲ್ಲ

ಶಂಕರ ಬಿದರಿಯವರ ಗಮನಕ್ಕೆ

Spread the love

ಇಂದು ಲಿಂಗಾಯತರು ದಿಕ್ಕು ತಪ್ಪುವವರಲ್ಲ , ದಿಕ್ಕು ತಪ್ಪಿಸುವವರು.

ವೀರಶೈವದ ಬಗ್ಗೆ ಆಗಲಿ , ವೀರಶೈವರ ಬಗ್ಗೆ ಆಗಲಿ ನನಗಾವ ಪೂರ್ವಗ್ರಹ ಪೀಡಿತನಾಗಿಲ್ಲ. ವೀರಶೈವದ ಬಗ್ಗೆ ನನಗೆ ಗೌರವ ಇದೆ, ಅವರ ಬಗ್ಗೆ ಹೆಮ್ಮೆಯೂ ಇದೆ . ಯಾಕೆಂದರೆ ವೀರಶೈವರಿಗೆ ತಮ್ಮದೆ ಆದ ಒಂದು concept ಇದೆ , ಆ concept ನಂತೆ ಅವರು ಹೊರಟಿದ್ದಾರೆ , ಅವರ ಬಗ್ಗೆ ನನಗೆ ಯಾವ ಗೊಂದಲವು ಮತ್ತು ಅಸಹಿಷ್ಣುತೆಯೂ ಇಲ್ಲ.

ಆದರೆ ಲಿಂಗಾಯತರು ಎಂದೂ ಹೇಳಿಕೊಂಡು ಬಸವಣ್ಣನನ್ನು ಒಪ್ಪದೇ! , ರೇಣುಕಾಚಾರ್ಯರ ಬಗ್ಗೆಯೂ ಜೈ ಎನ್ನುವ ಲಿಂಗಾಯತರ ಬಗ್ಗೆ ಕನಿಕರ ಮತ್ತು ಅವರ ದಡ್ಡತನದ ಬಗ್ಗೆ ಮರುಕವೆನಿಸುತ್ತಿದೆ. ಇದಕ್ಕೆ ಯಾರ್ಯರೊ ಸಾಕಷ್ಟು ಸಮಾಧಾನದ ಕಾಮೆಂಟ್ ಗಳು ನೀಡಬಹುದು , ಅದು ಅವರ ಅರಿವಿನ ಕೊರತೆಯೇ ಹೊರತು ಬೇರೇನೂ ಅಲ್ಲ. ವೀರಶೈವರಿಗೆ ಅವರ concept ಏನಂದ್ರೆ ಅವರು ಇಡಿ ಲಿಂಗಾಯತ ಸಮುದಾಯದ ಗುರುಗಳು , ಲಿಂಗಾಯತರು ನಮ್ಮ ಭಕ್ತರು ಎನ್ನುವ ಒಂದು ಕ್ಲೀಯರ್ ಆದ ತಂತ್ರಗಾರಿಕೆಗೆ ಅವರು ಬದ್ದರಾಗಿದ್ದಾರೆ. ಆದರೆ ಈ ಲಿಂಗಾಯತರಿಗೆ ತಾವು ಯಾರೆಂಬ ಅರಿವು ಇದೆಯೋ !!!??ಇಲ್ಲವೋ !!!??. ಅಂತ ಹೇಳಲು ಆಗಲ್ಲ. ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಸಬಲರಾಗಿರುವ ಇವರು , ಈ ವಿಷಯದಲ್ಲೇಕೆ ಗುಲಾಮಗಿರಿಗೆ ಒತ್ತಿ ಬಿದ್ದಿದ್ದಾರೆ ಗೊತ್ತಿಲ್ಲ.

ಇದೆ ವಿಷಯ ಇಂದು ಬೀದರಿ ಸಾಹೇಬ್ರಗೂ ಅನ್ವಯವಾಗುತ್ತೆ. ಹುಟ್ಟಿನಿಂದ ಲಿಂಗಾಯತನಾಗಿ , ಅದು ಬಸವಣ್ಣನ ನಾಡಿನಿಂದ ಬಂದವರವಾಗಿ ಬಸವಣ್ಣನ ಅಸ್ಥಿತ್ವಕ್ಕೆ ಧಕ್ಕೆ ಮಾಡುವಂತ ಇವರ ಹೇಳಿಕೆ ನಿಜಕ್ಕೂ ಅಘಾತಕಾರಿ. ಕರ್ನಾಟಕದ ಅತ್ಯಂತ ಉನ್ನತ ಹುದ್ದೆಯಲ್ಲಿದ್ದು , ಸಂವಿಧಾನಕ ಮತ್ತು ಆಡಳಿತಾತ್ಮಕ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿ , ಲಿಂಗಾಯತ ಮತ್ತು ಬಸವಣ್ಣನ ಬಗ್ಗೆ ಎಲ್ಲಾ ತಿಳಿದಿರುವ ಬಿದಿರಯವರ ಹೇಳಿಕೆ , ಹಾಸ್ಯಾಸ್ಪದ ಎನ್ನಬೇಕೊ , ಅಥವಾ ಅಧಿಕಾರದ ಸ್ವಾರ್ಥಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ಲಿಂಗಾಯತ ಎನ್ನಬೇಕೊ ತಿಳಿಯದಂತಿದೆ.

ಇಂದು ಅಧಿಕಾರದ ಉನ್ನತೆಯ ಸ್ಥಾನದಲ್ಲಿದ್ದು , ವೀರಶೈವ ಲಿಂಗಾಯತ ಧರ್ಮದ ಒಂದು ಒಳಪಂಗಡ ಎನ್ನುವ ವಾಸ್ತದ ಅರಿವು ಇದ್ದು ಧೈರ್ಯವಾಗಿ ಸತ್ಯ ಹೇಳಲು ಯಾಕೆ ಮುಜುಗರ?. ಇದರಿಂದ ಅವರು ಸಾಧಿಸುವುದಾದರೂ ಏನೂ ? . ಒಂದು ಕಾಲಘಟ್ಟದಲ್ಲಿ ಒಬ್ಬ ಖಾವಿಧಾರಿಯ ನಿರ್ಧಾರದಿಂದ ಲಿಂಗಾಯತರು ಇಷ್ಟು ಗೊಂದಲದಲ್ಲಿ ಸಿಕ್ಕಾಗಿಕೊಳ್ಳುವಂತೆ ಮಾಡಿದರು. ಇಂದು ತಾವು ಲಿಂಗಾಯತರಾಗಿ ಹುಟ್ಟಿ ಮತ್ತೆ ಲಿಂಗಾಯತರನ್ನು ದಿಕ್ಕು ತಪ್ಪಿಸುವಂತ ತಮ್ಮ ಹೇಳಿಕೆ ನಿಜಕ್ಕೂ ಬಸವ ದ್ರೋಹ . ಇಂತಹ ಐತಿಹಾಸಿಕ ಪ್ರಮಾದಕ್ಕೆ ತಾವು ಗುರಿಯಾಗಬೇಡಿ.

ವೀರಶೈವ ಲಿಂಗಾಯತ ಧರ್ಮದ ಉಪ ಪಂಗಡ ಎಂದು ಅವರನ್ನು ಒಪ್ಪಿಸಿ ಲಿಂಗಾಯತಕ್ಕೆ ಕರೆತರುವ ಜವಾಬ್ದಾರಿ ನಿಮ್ಮ ಮೇಲಿದೆ . ಈ ವಾಸ್ತವ ಸತ್ಯದ ಅರಿವು ತಮಗೆ ಇದೆ. ಲಿಂಗಾಯತರು ವೀರಶೈವರನ್ನು ದ್ವೇಷಿಸುವುದಿಲ್ಲ , ಯಾಕೆಂದರೆ ಒಂದು ಕಾಲದಲ್ಲಿ ವೀರಮಾಹೇಶ್ವರಾಗಿದ್ದವರು ಇಂದು ವೀರಶೈವರು ಆಗಿದ್ದಾರೆ . ವೀರಮಾಹೇಶ್ವರರು ಲಿಂಗಾಯತ ಧರ್ಮದವರು . ಅವರನ್ನು ಒಪ್ಪಿಸಿ ಲಿಂಗಾಯತ ಧರ್ಮಕ್ಕೆ ಕರೆತರುವಂತ ಕೆಲಸ ತಮ್ಮಿಂದಾಗಲಿ. ಕಲ್ಲಿನಲ್ಲಿ ಹುಟ್ಟಿದ ರೇಣುಕಾಚಾರ್ಯರನ್ನು , ಐತಿಹಾಸಿಕ ಪುರುಷು ಬಸವಣ್ಣನನ್ನೊಂದಿಗೆ ಸಮೀಕರಿಸು ತಮ್ಮ ವಿಚಾರದ ಹಿಂದೆ ತಮ್ಮ ಅಧಿಕಾರದ ಸ್ವಾರ್ಥ ತುಂಬಿದೆ . ಮತ್ತೊಮ್ಮೆ ಲಿಂಗಾಯತರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬೇಡಿ, ಯಾಕೆಂದರೆ ಇಂದು ಲಿಂಗಾಯತರು ದಿಕ್ಕು ತಪ್ಪುವವರು ಅಲ್ಲ , ದಿಕ್ಕು ಬದಲಾಯಿಸುವವರು ಎನ್ನುವುದು ಮರೆಯ ಬೇಡಿರಿ. ಸಮಯ ಬಂದರೆ ನಿಮ್ಮ ದಿಕ್ಕು ಬದಲಾಯಿಸುವ ತಾಕತ್ತು ಇಂದಿನ ಲಿಂಗಾಯತರಲ್ಲಿ ಇದೆ. ಹಾಗಾಗಿ ಸಮಾಜಕ್ಕೆ ಸಮುದಾಯಕ್ಕೆ ಒಳಿತಾಗುವಂತ ಕೆಲಸಗಳು ತಮ್ಮಿಂದ ಆಗಲಿ ಎಂದು ಬಯಸುವ ಲಿಂಗಾಯತ.

ಡಾ.ರಾಜಶೇಖರ ನಾರನಾಳ.

Related Articles

3 Comments

  1. ಕಜದರ್ ಇಲ್ಲದ ಬಿದರಿ

  2. ಸೊಗಸಾದ ಲೇಖನ…
    ಆದರೆ ಈ ಲೇಖನ ಬಿದರಿ ಅವರಿಗೆ ಮುಟ್ಟಬೇಕಲ್ಲವೇ ?ಭೌತಕವಾಗಿ ಅಲ್ಲ ಶರಣರೇ ಹೃದಯಕ್ಕೆ ತಲುಪಬೇಕಲ್ಲವೇ?

  3. ಸೊಗಸಾದ ಲೇಖನ…
    ಆದರೆ ಈ ಲೇಖನ ಬಿದರಿ ಅವರಿಗೆ ಮುಟ್ಟಬೇಕಲ್ಲವೇ ?ಭೌತಿಕವಾಗಿ ಅಲ್ಲ ಶರಣರೇ ಹೃದಯಕ್ಕೆ ತಲುಪಬೇಕಲ್ಲವೇ?

Leave a Reply

Your email address will not be published. Required fields are marked *

Back to top button